ಕರ್ನಾಟಕ

karnataka

ETV Bharat / state

ನ್ಯಾಯಾಂಗದಲ್ಲಿ ಇತಿಹಾಸ ಬರೆಯಲಿದ್ದಾರೆ ಕನ್ನಡತಿ : ನ್ಯಾ. ಬಿ.ವಿ ನಾಗರತ್ನ ಭವಿಷ್ಯದ ಸಿಜೆಐ!? - High Court news

ರಾಜ್ಯ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ. ಬಿ.ವಿ ನಾಗರತ್ನ ಅವರು ಭವಿಷ್ಯದಲ್ಲಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿದ್ದಾರೆ ಎಂಬ ಮಾತು ಕಾನೂನು ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

High Court
ರಾಜ್ಯ ಹೈಕೋರ್ಟ್‌

By

Published : Jun 1, 2020, 6:02 PM IST

ಬೆಂಗಳೂರು : ನಮ್ಮ ದೇಶದಲ್ಲಿ ರಾಷ್ಟ್ರಪತಿ, ಪ್ರಧಾನಿ ಹುದ್ದೆ ಸೇರಿದಂತೆ ಎಲ್ಲ ಅತ್ಯುನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದಾರಾದರೂ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಯಾರೂ ಏರಿಲ್ಲ. ಆದರೆ, ಈ ಸ್ಥಾನವನ್ನು ಕನ್ನಡತಿಯೊಬ್ಬರು ಅಲಂಕರಿಸುವ ಮಾತು ಇತ್ತೀಚೆಗೆ ಕಾನೂನು ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ರಾಜ್ಯ ಹೈಕೋರ್ಟ್‌ ನ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು 2027 ಕ್ಕೆ ಸುಪ್ರೀಂ ಕೋರ್ಟ್‌ ಸಿಜೆ ಆಗಲಿದ್ದಾರೆಂಬ ಮಾಹಿತಿ ದಟ್ಟವಾಗಿದೆ.

ನ್ಯಾ. ಬಿ.ವಿ ನಾಗರತ್ನ

ರಾಜ್ಯ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ. ಬಿ.ವಿ ನಾಗರತ್ನ ಅವರು ಭವಿಷ್ಯದಲ್ಲಿ ಸುಪ್ರೀಂಕೋರ್ಟ್​​​​ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿದ್ದಾರೆ ಎಂಬ ಮಾತು ಕಾನೂನು ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮಾತಿಗೆ ಪೂರಕವೆಂಬಂತೆ ಅವರಿಗೆ ಸಾಕಷ್ಟು ಸೇವಾವಧಿ ಮತ್ತು ಹಿರಿತನವಿದೆ. ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ 2 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಅದೇ ರೀತಿ ಮುಂಬರುವ ಜುಲೈ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನ್ಯಾ. ಆರ್‌ ಭಾನುಮತಿ ಹಾಗೂ ನ್ಯಾ. ಅರುಣ್ ಮಿಶ್ರಾ ಅವರು ನಿವೃತ್ತಿಯಾಗಲಿದ್ದು, ಒಟ್ಟು ನಾಲ್ಕು ಹುದ್ದೆಗಳು ಖಾಲಿಯಾಗಲಿವೆ.

ಮುಂದಿನ ಮೂರು ತಿಂಗಳೊಳಗೆ ಸುಪ್ರೀಂಕೋರ್ಟ್‌ನಲ್ಲಿ 4 ನ್ಯಾಯಮೂರ್ತಿ ಹುದ್ದೆಗಳು ಖಾಲಿಯಾಗುವಂತೆಯೇ, ಮಹಿಳಾ ನ್ಯಾಯಮೂರ್ತಿಗಳ ಕೊರತೆಯೂ ಎದುರಾಗಲಿದೆ. ದೇಶದ ಹೈಕೋರ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಪೈಕಿ ನ್ಯಾ. ಬಿ. ವಿ. ನಾಗರತ್ನ ಅವರು ಸಾಕಷ್ಟು ಹಿರಿಯರಾಗಿದ್ದಾರೆ. ಹೀಗಾಗಿ ನ್ಯಾ. ಬಿ.ವಿ ನಾಗರತ್ನ ಅವರು ಸದ್ಯದಲ್ಲೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದುತ್ತಾರೆ ಎಂಬ ಮಾತಿದೆ.

ಈಗಾಗಲೇ ಸುಪ್ರೀಂಕೋರ್ಟ್‌ ಕೊಲಿಜಿಯಂ ಇವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಎಲ್ಲ ವಿಷಯಗಳನ್ನು ಗಮನಿಸಿದಾಗ ನ್ಯಾ. ಬಿ.ವಿ ನಾಗರತ್ನ ಅವರು ಸದ್ಯದಲ್ಲೇ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿ ಪಡೆಯಲಿದ್ದಾರೆ. ಹಾಗಾದಲ್ಲಿ ಸುಪ್ರೀಂಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳು ನಿವೃತ್ತಿಗೊಂಡಂತೆ ಸಹಜವಾಗಿ ಇವರಿಗೆ ಲಭ್ಯವಾಗಲಿದೆ. 2008 ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಆಗಿ ನೇಮಕಗೊಂಡಿರುವ ನ್ಯಾ. ಬಿ.ವಿ ನಾಗರತ್ನ ಅವರಿಗಿನ್ನೂ 58 ವರ್ಷ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಿವೃತ್ತಿ ವಯಸ್ಸು 65. ಹೀಗಾಗಿ ಇವರಿಗೆ ಸೇವಾವಧಿ ಸುಧೀರ್ಘವಾಗಿದೆ.

ನ್ಯಾ. ಬಿ.ವಿ ನಾಗರತ್ನ ಅವರ ತಂದೆ ಇ.ಎಸ್‌ ವೆಂಕಟರಾಮಯ್ಯ ಅವರು 1989 ರಲ್ಲಿ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಗೊಂಡವರು. ಮುಂದಿನ ದಿನಗಳಲ್ಲಿ ಪುತ್ರಿ ಬಿ. ವಿ ನಾಗರತ್ನ ಅವರು ಸಿಜೆಐ ಹುದ್ದೆಗೇರಿದರೆ ಅದು ಕೂಡ ಇತಿಹಾಸವಾಗಲಿದೆ. ಒಟ್ಟಾರೆ 2027 ರ ಹೊತ್ತಿಗಾದರೂ ಮಹಿಳೆಯೊಬ್ಬರು ಸಿಜೆಐ ಹುದ್ದೆಗೇರುತ್ತಾರೆ ಎಂಬುದು ಇಡೀ ದೇಶದ ಮಹಿಳೆಯರ ಪಾಲಿಗೆ ಅತ್ಯಂತ ಸಂಭ್ರಮದ ವಿಚಾರ.

ABOUT THE AUTHOR

...view details