ಕರ್ನಾಟಕ

karnataka

ETV Bharat / state

ಮೆಗಾಸಿಟಿ ಹಗರಣ: ಎಂಎಲ್‌ಸಿ ಸಿಪಿ ಯೋಗೇಶ್ವರ್ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ - ಮೆಗಾಸಿಟಿ ಡೆವಲಪರ್ ವಂಚನೆ ಆರೋಪ

ವಂಚನೆ ಆರೋಪ ಪ್ರಕರಣ ಕುರಿತಂತೆ ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಿರಾಕರಿಸಿದೆ.

high-court-refuses-to-quash-case-against-mlc-cp-yogeshwar
ಮೆಗಾಸಿಟಿ ಹಗರಣ: ಎಂಎಲ್‌ಸಿ ಸಿಪಿ ಯೋಗೇಶ್ವರ್ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ

By

Published : Jul 29, 2023, 10:55 PM IST

Updated : Jul 30, 2023, 2:50 PM IST

ಬೆಂಗಳೂರು :ಮೆಗಾಸಿಟಿ ಡೆವಲಪರ್ಸ್ ವಂಚನೆ ಆರೋಪ ಸಂಬಂಧ ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಯೋಗೇಶ್ವರ್ ಮತ್ತು ಅವರ ಕುಟುಂಬದವರು ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಕೇಂದ್ರ ಸರ್ಕಾರದ ಗಂಭೀರ ಅಪರಾಧಗಳ ತನಿಖಾ ಇಲಾಖೆ (ಎಸ್‌ಎಫ್‌ಐಒ) ದಾಖಲಿಸಿದ್ದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಯೋಗೇಶ್ವರ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ವಜಾಗೊಳಿಸಿದೆ. ಆರೋಪ ಸಂಬಂಧ ಈಗಾಗಲೇ ಎಸ್‌ಎಫ್‌ಐಒ ಪ್ರಕರಣ ದಾಖಲಿಸಿ ಅದು ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಈ ಹಂತರದಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಇದನ್ನೂ ಓದಿ:ಹೆಂಡತಿಗೆ 25 ಸಾವಿರ ಪರಿಹಾರ ನೀಡಲು ನಿರಾಕರಣೆ: ಪತಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

ಪ್ರಕರಣದ ಹಿನ್ನೆಲೆ ಏನು ?:2009ರಲ್ಲಿ ಮೆಗಾಸಿಟಿ ಬಿಲ್ಡರ್ಸ್​ ಅಂಡ್ ಡೆವಲಪರ್ಸ್​ ಲಿಮಿಟೆಡ್ (ಎಂಡಿಬಿಎಲ್) ಹೆಸರಿನಲ್ಲಿ ಯೋಗೇಶ್ವರ್ ದೊಡ್ಡ ಟೌನ್ ಶಿಪ್‌ಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ನಿವೇಶನಗಳನ್ನು ನೀಡುವುದಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆನಂತರ ಅವರಿಗೆ ನಿವೇಶನವನ್ನೂ ನೀಡಿಲ್ಲ, ಸಾರ್ವಜನಿಕ ಹಣವನ್ನೂ ಸಹ ವಾಪಸ್ ನೀಡಿಲ್ಲ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದ ಅಪರಾಧಗಳ ತನಿಖಾ ಇಲಾಖೆ ಯೋಗೇಶ್ವರ್ ಮತ್ತು ಅವರ ಕುಟುಂಬದವರ ವಿರುದ್ಧ 2012ರಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ ಸೇರಿ ಆರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿತ್ತು.

ಪ್ರಾರಂಭದಲ್ಲಿ ತನಿಖೆಯಲ್ಲಿ ಎಸ್‌ಎಫ್‌ಐಎಂ ಸುಮಾರು ಯೋಗೇಶ್ವರ್ ಅವರಿಗೆ ಸೇರಿದ ಮೆಗಾಸಿಟಿ ಕಂಪನಿ ಸುಮಾರು 32.22 ಕೋಟಿ ರೂ. ದುರ್ಬಳಕೆಯಾಗಿದೆ ಎಂದು ಇಲಾಖೆ ಹೇಳಿತ್ತು. ಆನಂತರ ಆ ಪ್ರಮಾಣ ಸುಮಾರು 60 ಕೋಟಿ ರೂ. ಎಂದು ಹೇಳಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಯೋಗೇಶ್ವರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿರುವ ಕಾರಣ ಯೋಗೇಶ್ವರ್ ಪ್ರಕರಣದ ವಿಚಾರಣೆ ಎದುರಿಸಬೇಕಾಗಿದೆ.

ಇದನ್ನೂ ಓದಿ:ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಲಿಖಿತ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್

Last Updated : Jul 30, 2023, 2:50 PM IST

ABOUT THE AUTHOR

...view details