ಕರ್ನಾಟಕ

karnataka

ETV Bharat / state

ನಗ್ನ ದೃಶ್ಯ ಆಂತರ್ಜಾಲಕ್ಕೆ ಅಪ್ಲೋಡ್ ಆರೋಪ: ದುಬೈ ಮಹಿಳೆ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - Etv Bharat Kannada

ದುಬೈನಲ್ಲಿ ನೆಲೆಸಿರುವ ಮಹಿಳೆ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ನಿರಾಕರಿಸಿದೆ.

high court refuses to quash case
ದುಬೈ ಮಹಿಳೆ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಿರಾಕರಣೆ

By

Published : Dec 22, 2022, 6:10 PM IST

ಬೆಂಗಳೂರು: ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಮಹಿಳೆ ಹೆಸರಿನಲ್ಲಿ ಖರೀದಿಸಿರುವ ಸಿಮ್‌ಕಾರ್ಡ್ ಬಳಸಿ ನಗ್ನ ಚಿತ್ರಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿರುವ ಆರೋಪದ ಸಂಬಂಧ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಪಡಿಸುವಂತೆ ಕೋರಿ ದುಬೈನ ನಹದಾ-೨ ಎಂಬಲ್ಲಿ ನೆಲೆಸಿರುವ ಮಹಿಳೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೆ, ಅರ್ಜಿದಾರರ ಹೆಸರಿನಲ್ಲಿ ಸಿಮ್​ಕಾರ್ಡ್ ಖರೀದಿಯಾಗಿರುವುದರಿಂದ ಪ್ರಕರಣದಲ್ಲಿ ಅರ್ಜಿದಾರರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಆ ಮಾತ್ರಕ್ಕೆ ಅರ್ಜಿದಾರರು ಅಪರಾಧಿಯಾಗುವುದಿಲ್ಲ. ಬದಲಾಗಿ ಶಂಕಿತ ಆರೋಪಿಯಾಗಿದ್ದಾರೆ. ಪ್ರಕರಣದ ಮೂಲ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಅರ್ಜಿದಾರ ಮಹಿಳೆಯನ್ನು ತನಿಖೆಗೆ ಒಳಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಅರ್ಜಿದಾರರ ಹೆಸರನ್ನು ಪ್ರಕರಣದಿಂದ ತೆಗೆದು ಹಾಕಲು ಖುದ್ದು ಅವರೇ ತನಿಖೆಗೆ ಹಾಜರಾಗಬೇಕು. ಜತೆಗೆ, ಸಿಮ್‌ಕಾರ್ಡ್ ತಾನು ಖರೀದಿಸಿಲ್ಲ. ತನ್ನ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೋರೊಬ್ಬರು ಸಿಮ್​ಕಾರ್ಡ್ ಖರೀದಿಸಿದ್ದಾರೆ ಎಂಬುದನ್ನು ದೃಢೀಕರಿಸಬೇಕು. ಆಗ ನಿಜವಾದ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ನೆರವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು.?:ಮೊಬೈಲ್ ನೆಟ್‌ವರ್ಕ್ ಸೇವೆ ಪೂರೈಕೆದಾರ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ದುಬೈನ ನಹದಾ-೨ ಎಂಬಲ್ಲಿ ನೆಲೆಸಿರುವ ಮಹಿಳೆ ವಿರುದ್ಧ ಬೆಂಗಳೂರು ಪೂರ್ವ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಅರ್ಜಿದಾರರ ವಿರುದ್ದ ಅಂತರ್ಜಾಲದಲ್ಲಿ ನಗ್ನ ದೃಶ್ಯಗಳ ಅಪ್ಲೋಡ್ ಮಾಡಿರುವ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ಮತ್ತು 67(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರಾದ ಮಹಿಳೆ ಅವರು 13 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಅವರ ಹೆಸರಿನಲ್ಲಿ ಯಾರಾದರೂ ಫೋನ್ ಮತ್ತು ಸಿಮ್​ಕಾರ್ಡ್ ಖರೀದಿಸಿದ್ದರೆ ಅದಕ್ಕೆ ಅವರು ಜಾವಾಬ್ದಾರರಲ್ಲ. ಆದರೆ, ಪ್ರಕರಣ ಸಂಬಂಧದ ಮೂಲ ದೂರಿನಲ್ಲಿ ಮಿದುಲಾ ಎಂಬುದಾಗಿ ಉಲ್ಲೇಖಿಸಲಾಗಿದೆ. ಆದರೂ, ಮಹಿಳೆಯ ಹೆಸರಿನಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಪ್ರಕರಣ ರದ್ದು ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ವಕೀಲರು, ದೂರಿನಲ್ಲಿ ಮಿದುಲಾ ಹೆಸರನ್ನು ಆಕಸ್ಮಿಕವಾಗಿ ನಮೂದಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಟೈಪಿಂಗ್ ದೋಷದಿಂದ ಈ ರೀತಿಯಲ್ಲಿ ಹೆಸರು ಸೇರ್ಪಡೆಯಾಗಿದೆ. ಮಿದುಲಾ ಮತ್ತು ಆರೋಪಿ ಮಹಿಳೆಯ ಪ್ರಕರಣಗಳು ಸಂಪೂರ್ಣ ವಿಭಿನ್ನವಾಗಿವೆ. ಅಲ್ಲದೆ, ಈ ಪ್ರಕರಣದಲ್ಲಿ ಆರೋಪಿ ಹೆಸರಿನಲ್ಲಿ ಪಡೆದುಕೊಂಡಿರುವ ಸಿಮ್‌ಕಾರ್ಡ್ ಅವರದ್ದೋ, ಅವರು ಪಡೆದು ಮತ್ತೊಬ್ಬರಿಗೆ ನೀಡಿದ್ದಾರೋ, ಇಲ್ಲವೇ ಅವರ ಹೆಸರನ್ನು ದುರ್ಬಳಕೆ ಮಾಡಿ ಮತ್ತೊಬ್ಬರು ಖರೀದಿಸಿದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಹೀಗಾಗಿ ತನಿಖೆ ಮುಂದುವರೆಯಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ:ಮುಂದಿನ ಬಾರಿ ಯಾವ ಪಕ್ಷಕ್ಕೆ ಮತ, ಯಾರು ಗೆದ್ದರೆ ಉತ್ತಮ?.. ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿಗಳು ವಶಕ್ಕೆ

ABOUT THE AUTHOR

...view details