ಕರ್ನಾಟಕ

karnataka

ETV Bharat / state

ಟರ್ಫ್ ಕ್ಲಬ್ ಆನ್​​ಲೈನ್ ಬೆಟ್ಟಿಂಗ್​​ಗೆ ಅನುಮತಿ ವಿಚಾರ: ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ - ಬೆಂಗಳೂರು ಟರ್ಫ್ ಕ್ಲಬ್​ಗೆ ಆನ್​ಲೈನ್ ಬೆಟ್ಟಿಂಗ್

ನಗರದ ಸಿ.ಗೋಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

High Court Question to govt
ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

By

Published : Dec 5, 2020, 4:28 PM IST

ಬೆಂಗಳೂರು: ಟರ್ಫ್ ಕ್ಲಬ್​ಗೆ ಆನ್​ಲೈನ್ ಬೆಟ್ಟಿಂಗ್ ನಡೆಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಯಾವ ಆಧಾರದಲ್ಲಿ ಅನುಮತಿ ನೀಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಲು ತಾಕೀತು ಮಾಡಿದೆ.

ಈ ಕುರಿತು ನಗರದ ಸಿ.ಗೋಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನೀಡಿದ ವಿವರಣೆ ಒಪ್ಪದ ಪೀಠ, ಸರ್ಕಾರ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಬೆಟ್ಟಿಂಗ್​​ಗೆ ಅನುಮತಿ ನೀಡಿರುವ ಕ್ರಮ ಅಸಂಬಂದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಟರ್ಫ್ ಕ್ಲಬ್ ಆನ್​ಲೈನ್ ಬೆಟ್ಟಿಂಗ್​ಗೆ ಅನುಮತಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಅಲ್ಲದೆ ಆನ್​​ಲೈನ್ ಬೆಟ್ಟಿಂಗ್​​ಗೆ ಡಿ. 16ರಿಂದ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಸರ್ಕಾರಕ್ಕೆ ಆನ್​​ಲೈನ್ ಬೆಟ್ಟಿಂಗ್​​ಗೆ ಅನುಮತಿ ನೀಡಲು ಯಾವುದೇ ಅಧಿಕಾರವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಅನುಮತಿ ನೀಡಿದರೆ ಅದು ಕಾನೂನು ಬಾಹಿರ ಕಾರ್ಯಕ್ಕೆ ಕಾನೂನು ಬದ್ಧತೆ ನೀಡಿದಂತಾಗುತ್ತದೆ. ಹೀಗಾಗಿ ಸರ್ಕಾರ ಯಾವ ಕಾನೂನಿನ ಆಧಾರದಲ್ಲಿ ಅನುಮತಿ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನಿರ್ದೇಶಿಸಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಟರ್ಫ್ ಕ್ಲಬ್ ಬುಕ್ಕಿಗಳಿಂದ ತೆರಿಗೆ ವಂಚನೆ: 39 ಜನರನ್ನು ಬಂಧಿಸಿದ ಸಿಸಿಬಿ ಪೊಲೀಸರು

ABOUT THE AUTHOR

...view details