ಬೆಂಗಳೂರು:ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧ ಸಡಿಲಿಕೆ ಕೋರಿ ಕಾಶ್ಮೀರ ಮೂಲದ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅ.14ಕ್ಕೆ ಮುಂದೂಡಿದೆ.
ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಸಡಿಲಿಕೆಗೆ ಅರ್ಜಿ: ವಿಚಾರಣೆ ಅ. 14ಕ್ಕೆ ಮುಂದೂಡಿಕೆ - ‘ kashmir's Restriction relaxation matter
ಕಾಶ್ಮೀರ ಮೂಲದ ವಿದ್ಯಾರ್ಥಿಯೋರ್ವ, ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಸಡಿಲಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ವಿಚಾರಣೆಯನ್ನು ಅ. 14ಕ್ಕೆ ಹೈಕೋರ್ಟ್ ಮುಂದೂಡಿದೆ.

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಸಡಿಲಿಕೆ ವಿಚಾರವಾಗಿ ಅರ್ಜಿಯೊಂದು ಸುಪ್ರೀಂಕೋರ್ಟಿನಲ್ಲೂ ವಿಚಾರಣೆ ನಡಿಯುತ್ತಿದೆ. ಸುಪ್ರೀಂಕೋರ್ಟಿನ ವಿಚಾರಣೆಯನ್ನು ಗಮಸಿಕೊಂಡು ನಂತರ ಈ ವಿಚಾರಣೆಯನ್ನು ಕೈಗೊಳ್ಳಲಾಗುವುದು ಎಂದು ಮುಂದೂಡಿಕೆಯ ಕಾರಣವನ್ನು ಹೈಕೋರ್ಟ್ ನೀಡಿದೆ.
ಆಗಸ್ಟ್ 27ರಂದು ಕಾಶ್ಮೀರ ಮೂಲದ ವಿದ್ಯಾರ್ಥಿ ಎಸ್.ಪಿ.ಸುಹೈಲ್ ಅಹ್ಮದ್, ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಸಡಿಲಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆರ್ಟಿಕಲ್ 370 ರದ್ದು ಆದ ಬಳಿಕ ಅಲ್ಲಿಯ ಜನರೊಂದಿಗೆ ಸಂವಹನ ನಡೆಸಲು ಆಗುತ್ತಿಲ್ಲ. ಹೀಗಾಗಿ, ಈ ನಿರ್ಬಂಧವನ್ನು ಸಡಿಲಿಕೆಗೊಳಿಸಲು ಕೇಂದ್ರ, ರಾಜ್ಯ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.