ಕರ್ನಾಟಕ

karnataka

ETV Bharat / state

ನ್ಯಾಷನಲ್ ಕಾಲೇಜು ಮೈದಾನದಲ್ಲಿ 11ದಿನಗಳ ಬದಲು 5 ದಿನ ಗಣೇಶೋತ್ಸವ ನಡೆಸಲು ಹೈಕೋರ್ಟ್ ಅನುಮತಿ - ವಿದ್ಯಾರಣ್ಯ ಯುವಕ ಸಂಘ

ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ 5 ದಿನಗಳವರೆಗೆ ಮಾತ್ರ ಗಣೇಶ ಉತ್ಸವ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.

ಹೈಕೋರ್ಟ್

By

Published : Aug 29, 2019, 11:19 PM IST

Updated : Aug 29, 2019, 11:49 PM IST

ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ 5 ದಿನಗಳ ವರೆಗೆ ಮಾತ್ರ ಗಣೇಶ ಉತ್ಸವ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.

ಶಂಕರಪುರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿದೆ.

ಈ ವೇಳೆ ಅರ್ಜಿದಾರರ ಪರ ವಕೀಲರು ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ವಿದ್ಯಾರಣ್ಯ ಯುವಕ ಸಂಘಕ್ಕೆ ಗಣೇಶ ಉತ್ಸವ ನಡೆಸಲು 11 ದಿನಗಳ ಕಾಲ ಅವಕಾಶ ನೀಡಿದ್ದು, ಇದು ಬಿಬಿಎಂಪಿ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದರು.

ಅರ್ಜಿದಾರರ ವಾದ ಆಲಿಸಿದ ನ್ಯಾಯಲಯ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ‌ 7 ವರ್ಷದಿಂದ ಗಣೇಶೋತ್ಸವ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದೀರಿ. ಇದರಿಂದ, ಫುಟ್ಬಾಲ್, ವಾಲಿಬಾಲ್ ಸೇರಿ ಇನ್ನಿತರ ಕ್ರೀಡೆಗಳಿಗೆ ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿತು. ಸರ್ಕಾರದ ಪರ ವಕೀಲರು ಇದಕ್ಕುತ್ತರಿಸಿ ಕಾನೂನು ಪ್ರಕಾರ ಗಣೇಶ ಉತ್ಸವಕ್ಕೆ 5 ದಿನಗಳು ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದರು. ನಂತರ ಕೋರ್ಟ್​ 11 ದಿನದ ಬದಲಿಗೆ 5 ದಿನಕ್ಕೆ ಅವಕಾಶ ಕಲ್ಪಿಸಿತು.

Last Updated : Aug 29, 2019, 11:49 PM IST

ABOUT THE AUTHOR

...view details