ಕರ್ನಾಟಕ

karnataka

ETV Bharat / state

ಇಸ್ರೋದಿಂದ ಆಕ್ಸಿಜನ್ : ಶಾಸಕ ಎಚ್​.ಕೆ. ಪಾಟೀಲರಿಗೆ ಹೈಕೋರ್ಟ್ ತರಾಟೆ

ಇಸ್ರೋದಿಂದ ಆಕ್ಸಿಜನ್ ಪಡೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡ ಎಚ್. ಕೆ ಪಾಟೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.

high-court-outrage-against-h-k-patil
ಕಾಂಗ್ರೆಸ್ ಮುಖಂಡನಿಗೆ ಹೈಕೋರ್ಟ್ ತರಾಟೆ

By

Published : May 20, 2021, 7:52 PM IST

ಬೆಂಗಳೂರು: ಆಕ್ಸಿಜನ್ ಕೊರತೆ ಸರಿದೂಗಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಆಕ್ಸಿಜನ್ ಪಡೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ಮುಖಂಡರೊಬ್ಬರಿಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಇಸ್ರೋದಿಂದ ಆಕ್ಸಿಜನ್ ಪಡೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡರ ಎಚ್.ಕೆ ಪಾಟೀಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ಅರ್ಜಿಯಲ್ಲಿನ ಮನವಿ ಗಮನಿಸಿದ ಪೀಠ, ಇಸ್ರೋದಿಂದ ಆಕ್ಸಿಜನ್ ಪಡೆಯಲು ನಿರ್ದೇಶಿಸುವಂತೆ ಮನವಿ ಮಾಡಿದ್ದೀರಿ. ಆದರೆ, ಶಾಸಕರಾಗಿ ಸಮಸ್ಯೆ ಬಗೆಹರಿಸಲು ನೀವೇನು ಮಾಡಿದ್ದೀರಿ? ಎಂದು ಪ್ರಶ್ನಿಸಿತು.

ಮತ್ತೊಬ್ಬರಿಗೆ ಹೇಳುವ ಮುನ್ನ ನಿಮ್ಮ ಕೊಡುಗೆ ಏನೆಂದು ತಿಳಿಸಿ. ಕರ್ನಾಟಕದ ಜನತೆಗೆ ನೀವೇನು ಮಾಡಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಎಷ್ಟು ಹಾಸಿಗೆಗಳನ್ನು ಒದಗಿಸಿದ್ದೀರಿ, ಒಂದಾದರೂ ಆಕ್ಸಿಜನ್ ಘಟಕ ಸ್ಥಾಪಿಸಿರುವಿರೇ, ಪ್ರಭಾವಿ ಹುದ್ದೆಯಲ್ಲಿರುವ ನೀವು ಕೆಲಸ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿತು.

ಅಲ್ಲದೇ ಈ ವಿಚಾರವನ್ನು ಸದನದಲ್ಲಿ ಪ್ರಶ್ನಿಸಲು ಅವಕಾಶವಿತ್ತು. ಹಾಗಿದ್ದೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೀರಿ. ಶಾಸಕರಾಗಿ ಈ ಸಂದರ್ಭದಲ್ಲಿ ಜನರಿಗೆ ಏನು ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಪೀಠ, ಇದು ಪಬ್ಲಿಕ್ ಇಂಟರೆಸ್ಟ್ ಇರುವ ಅರ್ಜಿಯಲ್ಲ. ಬದಲಿಗೆ ಪಬ್ಲಿಸಿಟಿಗಾಗಿ ಹಾಕಿರುವ ಅರ್ಜಿ. ನೀವು ಅರ್ಜಿ ಹಿಂಪಡೆಯದಿದ್ದರೆ ಭಾರಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಕೆಲ ಕಾಲ ವಿಚಾರಣೆ ಮುಂದೂಡಿತು.

ಮಧ್ಯಾಹ್ನ 1.30ರ ಸುಮಾರಿಗೆ ಎಚ್.ಕೆ. ಪಾಟೀಲ್ ಪರ ವಕೀಲರು, ಅರ್ಜಿ ಹಿಂಪಡೆಯುವುದಾಗಿ ಪೀಠಕ್ಕೆ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಓದಿ:ಪ್ರತಿಪಕ್ಷಗಳ ಕಾರ್ಯನಿರ್ವಹಣೆಗೆ ರಾಜ್ಯಸರ್ಕಾರ ಅಡ್ಡಿಪಡಿಸುತ್ತಿದೆ: ರಾಮಲಿಂಗಾ ರೆಡ್ಡಿ

ABOUT THE AUTHOR

...view details