ಕರ್ನಾಟಕ

karnataka

ETV Bharat / state

ಭೀಷ್ಮ ಕೆರೆ ಆವರಣದಲ್ಲಿ ಅಭಿವದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆ - ಅಭಿವದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆ

ಗದಗ ನಗರದ ಭೀಷ್ಮ ಕೆರೆ ಆವರಣದಲ್ಲಿ ಅಮೃತ ಸಿಟಿ ಯೋಜನೆ ಅಡಿ ನಡೆಯುತ್ತಿರುವ ಅಭಿವದ್ಧಿ ಕಾಮಗಾರಿಗೆ ಸದ್ಯ ಹೈಕೋರ್ಟ್ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ಮೂರು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

ಭೀಷ್ಮ ಕೆರೆ ಆವರಣದಲ್ಲಿ ಅಭಿವದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆ

By

Published : Sep 18, 2019, 12:50 PM IST

ಬೆಂಗಳೂರು: ಗದಗ ನಗರದ ಭೀಷ್ಮ ಕೆರೆ ಆವರಣದಲ್ಲಿ ಅಮೃತ ಸಿಟಿ ಯೋಜನೆ ಅಡಿ ನಡೆಯುತ್ತಿರುವ ಅಭಿವದ್ಧಿ ಕಾಮಗಾರಿಗೆ ಸದ್ಯ ಹೈಕೋರ್ಟ್ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ಮೂರು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

ಈ ಕುರಿತು ನಜೀರಾ ಅಹ್ಮದ್ ಹೆಚ್. ಅಂಗಡಿ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ನ್ಯಾಯಪೀಠದಲ್ಲಿ ಇಂದು ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು‌, ಗದಗದ ಭೀಷ್ಮ ಕೆರೆ ಆವರಣದ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಓಪನ್ ಜಿಮ್, ಫುಡ್ ಪಾರ್ಕ್, ವಸ್ತು ಪ್ರದರ್ಶನ ಮಳಿಗೆ ಸೇರಿ ಇನ್ನಿತರ ಅಭಿವದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ‌ಇದರಿಂದ‌ ಕೆರೆ ಒತ್ತುವರಿಯಾಗಲಿದೆ. ಹೀಗಾಗಿ ಇದಕ್ಕೆ ತಡೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಲಯ‌, ಸದ್ಯ ನಡೆಯುತ್ತಿರುವ ಕಾಮಗಾರಿಗೆ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.

ABOUT THE AUTHOR

...view details