ಕರ್ನಾಟಕ

karnataka

ETV Bharat / state

ಬಫರ್ ವಲಯ ವ್ಯಾಪ್ತಿಯ ಕಟ್ಟಡಗಳ ಸರ್ವೇ ‌ನಡೆಸಲು ಹೈಕೋರ್ಟ್ ಆದೇಶ - ಬಫರ್ ವಲಯದಲ್ಲಿನ ಕಟ್ಟಡಗಳ ಸರ್ವೇ

ರಾಜ್ಯದಲ್ಲಿನ ಇತರೆ ಜಲಾಶಯಗಳ ವ್ಯಾಪ್ತಿಯ ಬಫರ್ ವಲಯದಲ್ಲಿನ ಕಟ್ಟಡಗಳ ಸರ್ವೇ ‌ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್

By

Published : Aug 20, 2019, 1:27 AM IST

ಬೆಂಗಳೂರು:ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿದಂತೆ ರಾಜ್ಯದಲ್ಲಿನ ಇತರೆ ಜಲಾಶಯಗಳ ವ್ಯಾಪ್ತಿಯ ಬಫರ್ ವಲಯದಲ್ಲಿನ ಕಟ್ಟಡಗಳ ಸರ್ವೇ ‌ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯೂ ಮುಖ್ಯನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು‌ ಜಲಾಶಯ ಪ್ರದೇಶದ ಸುತ್ತಲಿನ ಕಟ್ಟಡವನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ನವೆಂಬರ್ 18, 2003ರಂದು ‌ನೋಟಿಫಿಕೇಷನ್ ಹೊರಡಿಸಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ, ಅರ್ಕಾವತಿ, ಕುಮುದ್ವತಿ ನದಿಗಳ ಜಲಾನಯನ ವ್ಯಾಪ್ತಿಯಲ್ಲಿನ ಪ್ರದೇಶ ಬಫರ್ ಝೋನ್​ಗೆ ಒಳಪಡುತ್ತದೆ ಎಂದು ಕೋರ್ಟ್​ಗೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ ಜಲಾಶಯದ ಸುತ್ತ ಇರುವ ಕಟ್ಟಡಗಳ ಸರ್ವೇ ‌ನಡೆಸಿ ನಾಲ್ಕು ವಾರದಲ್ಲಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿಕೆ ಮಾಡಿದೆ.

ABOUT THE AUTHOR

...view details