ಕರ್ನಾಟಕ

karnataka

ETV Bharat / state

ಬೆಡ್ ಬ್ಲಾಕಿಂಗ್ ಪ್ರಕರಣ.. ಮೇಲ್ವಿಚಾರಣೆಗೆ ಹಿರಿಯ ಐಪಿಎಸ್ ಅಧಿಕಾರಿ ನೇಮಿಸಲು ಹೈಕೋರ್ಟ್ ಆದೇಶ.. - ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮೇಲ್ವಿಚಾರಣೆ

ಅನುಭವಿ ಐಪಿಎಸ್ ಅಧಿಕಾರಿ ತನಿಖೆ ಉಸ್ತುವಾರಿವಹಿಸಬೇಕು. ಸೈಬರ್ ತಜ್ಞರು ಸೇರಿದಂತೆ ಪ್ರಕರಣಕ್ಕೆ ಅಗತ್ಯವಿರುವ ತಜ್ಞರು ಕೂಡ ತನಿಖಾ ತಂಡದಲ್ಲಿರಬೇಕು ಎಂದು ನಿರ್ದೇಶಿಸಿತು..

highcourt
highcourt

By

Published : May 12, 2021, 7:24 PM IST

ಬೆಂಗಳೂರು : ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಿಸಿಬಿ ಸಲ್ಲಿಸಿರುವ ತನಿಖಾ ವರದಿ ಪರಿಶೀಲಿಸಿದ ಹೈಕೋರ್ಟ್, ಪ್ರಕರಣ ಬಹಳ ಸೂಕ್ಷ್ಮ ಹಾಗೂ ಗಂಭೀರವಾಗಿದೆ.

ಆದ್ದರಿಂದ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್​​ಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಮಣ್ಯ ಅವರು ಸಿಸಿಬಿಯ ಪ್ರಾಥಮಿಕ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.

ಹಾಗೆಯೇ, ವಿವರಣೆ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದರು. ವರದಿ ಪರಿಶೀಲಿಸಿದ ಪೀಠ, ಸಿಸಿಬಿ ಇನ್ಸ್​ಪೆಕ್ಟರ್ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಅದು ಸಾಕಾಗುವುದಿಲ್ಲ.

ಅನುಭವಿ ಐಪಿಎಸ್ ಅಧಿಕಾರಿ ತನಿಖೆ ಉಸ್ತುವಾರಿವಹಿಸಬೇಕು. ಸೈಬರ್ ತಜ್ಞರು ಸೇರಿದಂತೆ ಪ್ರಕರಣಕ್ಕೆ ಅಗತ್ಯವಿರುವ ತಜ್ಞರು ಕೂಡ ತನಿಖಾ ತಂಡದಲ್ಲಿರಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಮುಂದಿನ ವಿಚಾರಣೆ ವೇಳೆ ತನಿಖೆಯ ವಿವರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ತನಿಖೆಯ ಮೇಲುಸ್ತುವಾರಿಯನ್ನು ನಗರ ಕ್ರೈಮ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details