ಕರ್ನಾಟಕ

karnataka

ETV Bharat / state

ಸಾಕು ಪ್ರಾಣಿಗಳ ತಳಿ ಸಂವರ್ಧನೆ: ಪಶುಪಾಲನಾ, ಪಶುವೈದ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್ - High Court notice banglore news

ಸಾಕು ಪ್ರಾಣಿಗಳ ತಳಿ ಸಂವರ್ಧನೆ ಕುರಿತು 'ಕಂಪ್ಯಾಷನ್ ಅನ್​ಲಿಮಿಟೆಡ್ ಪ್ಲಸ್ ಆ್ಯಕ್ಷನ್' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. 'ಸಾಕು ಪ್ರಾಣಿಗಳ ತಳಿ ಸಂವರ್ಧನೆಗೆ ಕಾನೂನು ಬಾಹಿರವಾಗಿ ಮುಂದಾಗಿರುವವರ ಕುರಿತು ವಿವರ ನೀಡುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಆದೇಶಿಸಿದೆ.

High Court notice
ಹೈಕೋರ್ಟ್ ನೋಟಿಸ್

By

Published : Jan 9, 2020, 5:12 AM IST

ಬೆಂಗಳೂರು:ಸಾಕು ಪ್ರಾಣಿಗಳ ತಳಿ ಸಂವರ್ಧನೆಗೆ ಕಾನೂನು ಬಾಹಿರವಾಗಿ ಮುಂದಾಗಿರುವವರ ಕುರಿತು ವಿವರ ನೀಡುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.

'ಕಂಪ್ಯಾಷನ್ ಅನ್​ಲಿಮಿಟೆಡ್ ಪ್ಲಸ್ ಆ್ಯಕ್ಷನ್' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, 'ರಾಜ್ಯದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸಾಕು ಪ್ರಾಣಿಗಳ ಅಂಗಡಿಗಳನ್ನು ತೆರೆದಿದ್ದಾರೆ. ತಳಿ ಸಂವರ್ಧನೆ ನಿಯಮ 2017 ಹಾಗೂ ಸಾಕು ಪ್ರಾಣಿಗಳ ಅಂಗಡಿ ನಿಯಮ 2018 ಅನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ನಿಯಮ ಜಾರಿಗೆ ತರದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ' ಎಂದು ಪೀಠಕ್ಕೆ ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ABOUT THE AUTHOR

...view details