ಬೆಂಗಳೂರು: ಹೈದರಾಬಾದ್ ಕರ್ನಾಟಕ ಮೀಸಲು ಅಡಿಯಲ್ಲಿ ಬಡ್ತಿ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ(ಕೆಪಿಸಿಎಲ್) ಕಾರ್ಯ ನಿರ್ವಹಿಸುತ್ತಿರುವ 119 ಎಂಜಿನಿಯರ್ಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಂವಿಧಾನದ ವಿಧಿ 371(ಜೆ)(2) (98ನೇ ತಿದ್ದುಪಡಿ) ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಮೀಸಲು ಅಡಿಯಲ್ಲಿ ಉದ್ಯೋಗ ನೇಮಕಾತಿ ಮತ್ತು ಬಡ್ತಿ ನೀಡುವ ಕ್ರಮ ಪ್ರಶ್ನಿಸಿ ಕೆಪಿಸಿಎಲ್ ಎಂಜಿನಿಯರ್ಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಆರ್. ದೇವದಾಸ್ ಅವರಿದ್ದ ಪೀಠ ಈ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಹೈ.ಕ ಮೀಸಲು ಅಡಿ 110 ಮಂದಿ ಎಂಜಿನಿಯರ್ಗಳಿಗೆ ನೀಡಿರುವ ಬಡ್ತಿಯು ಅರ್ಜಿ ಸಂಬಂಧ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶ ಮಾಡಿದೆ.