ಬೆಂಗಳೂರು :ನಗರದಲ್ಲಿನ ಮರಗಳ ಗಣತಿಯನ್ನು ಒಂದು ತಿಂಗಳ ಒಳಗಾಗಿ ಪ್ರಾರಂಭಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮರಗಳ ಗಣತಿ ತಿಂಗಳೊಳಗೆ ಪ್ರಾರಂಭಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ - ಬೆಂಗಳೂರಿನಲ್ಲಿ ಮರಗಳ ಗಣತಿ
ಬೆಂಗಳೂರು: ಮರಗಳ ರಕ್ಷಣೆಗೆ ಸಂಬಂಧಿಸಿದಂತೆ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಮರಗಳ ಗಣತಿ ಕುರಿತು 2019ರ ಆಗಸ್ಟ್ 20ರಂದು ನಿರ್ದೇಶನ ನೀಡಲಾಗಿತ್ತು. ಇಲ್ಲಿಯವರೆಗೆ ಮರಗಳ ಗಣತಿಯನ್ನು ಪ್ರಾರಂಭಿಸಲಿಲ್ಲ ಏಕೆ ಎಂದು ಬಿಬಿಎಂಪಿ ವಿರುದ್ಧ ನ್ಯಾಯಾಲಯ ಕಿಡಿಕಾರಿತು. ಈ ಸಂಧರ್ಭದಲ್ಲಿ ಬಿಬಿಎಂಪಿ ಪರ ವಕೀಲರು ನಗರದಲ್ಲಿರುವ ಮರಗಳ ಗಣತಿಯನ್ನು ಆದಷ್ಟು ಬೇಗ ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದರು.
ಹೀಗಾಗಿ ನ್ಯಾಯಾಲಯ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
Last Updated : Oct 11, 2019, 6:11 AM IST