ಬೆಂಗಳೂರು:ಉತ್ತರ ಪ್ರದೇಶ ಮೂಲದವರೆನ್ನಲಾದ ಕೆಲ ಖದೀಮರು ಹೈಕೋರ್ಟ್ನ ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಹೈಕೋರ್ಟ್ ಜಡ್ಜ್ ಸಹಿಯನ್ನೇ ನಕಲು ಮಾಡಿದ ಭೂಪರು... ಖದೀಮರಿಗಾಗಿ ಪೊಲೀಸರ ತಲಾಶ್ - undefined
ಹೈಕೋರ್ಟ್ ನ್ಯಾಯಮೂರ್ತಿಗಳ ಸಹಿಯನ್ನು ನಕಲು ಮಾಡಿ ವಾರಂಟ್ಗೆ ತಡೆಯಾಜ್ಞೆ ನೀಡಿರುವ ರೀತಿಯ ಆದೇಶ ಪ್ರತಿಯನ್ನು ಸೃಷ್ಟಿಸಿ ಕೋರ್ಟ್ಗೆ ಸಲ್ಲಿಸಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತಲಾಶ್ ನಡೆಸಿದ್ದಾರೆ.
ಉತ್ತರ ಪ್ರದೇಶ ಮೂಲದ ಕೆಲವರು ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ರು. ಹೀಗಾಗಿ ಡಿ.ಜಿ ಮತ್ತು. ಐಜಿಪಿ ಉತ್ತರ ಪ್ರದೇಶ ರಾಜ್ಯದ ಮುಖಾಂತರ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದರು. ಆದ್ರೆ ಆರೋಪಿಗಳಾದ ವಿಕ್ಕಿ ಸಿಂಗ್ ಹಾಗೂ ವಿಶಾಲ್ ಸಿಂಗ್ ವಾರಂಟ್ಗೆ ತಡೆಯಾಜ್ಞೆ ನೀಡಿರುವುದಾಗಿ ಆದೇಶ ಪ್ರತಿ ಸೃಷ್ಟಿಸಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಸಹಿ ನಕಲು ಮಾಡಿದ್ದಾರೆ.
ಈ ವಿಚಾರ ಹೈಕೋರ್ಟ್ ಡೆಪ್ಯೂಟಿ ರಿಜಿಸ್ಟ್ರಾರ್ ಗಮನಕ್ಕೆ ಬಂದಿದ್ದು, ತಕ್ಷಣ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ವಿಧಾನಸೌಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.