ಕರ್ನಾಟಕ

karnataka

ETV Bharat / state

ನ್ಯಾಯಾಲಯಗಳಿಗೆ ತಟ್ಟಿದ ಕೊರೊನಾ ಬಿಸಿ: ಹೊಸ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್​​ - ಬೆಂಗಳೂರು ಕೊರೊನಾ

ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಇದರನ್ವಯ ಹಲವು ನಿಯಮ ಜಾರಿ ಮಾಡಿದ್ದು, ಎಲ್ಲ ನ್ಯಾಯಾಲಯಗಳು ಪಾಲಿಸುವಂತೆ ಸೂಚಿಸಲಾಗಿದೆ.

high-court
ಹೈಕೋರ್ಟ್​​

By

Published : Apr 9, 2021, 3:03 PM IST

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಗರದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟ್​​ನ ಉಸ್ತುವಾರಿ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ನೋಟಿಸ್ ಹೊರಡಿಸಿದ್ದಾರೆ. ಅದರಂತೆ ಪರಿಷ್ಕೃತ ಮಾರ್ಗಸೂಚಿಗಳು ಏಪ್ರಿಲ್ 12ರಿಂದ ಜಾರಿಗೆ ಬರಲಿವೆ.

ಹೊಸ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್​​

ವಕೀಲರು ಕೇಸ್ ದಾಖಲಿಸಲು ಹಾಗೂ ಪ್ರಕರಣದ ವಿಚಾರಣೆ ಇದ್ದರಷ್ಟೇ ನ್ಯಾಯಾಲಯಗಳಿಗೆ ಭೇಟಿ ನೀಡಬೇಕು. ಕಕ್ಷೀದಾರರು ತಮ್ಮ ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲು ಮಾಡಲು ದಿನಾಂಕ ನಿಗದಿಪಡಿಸಿದ್ದರಷ್ಟೇ ನ್ಯಾಯಾಲಯ ಸಂಕೀರ್ಣಕ್ಕೆ ಆಗಮಿಸಬೇಕು. ಸಾಕ್ಷ್ಯ ದಾಖಲು ವೇಳೆ ಕಕ್ಷೀದಾರರು ಕೋರ್ಟ್ ಪ್ರವೇಶಿಸಲು ತಮ್ಮ ವಕೀಲರಿಂದ ಕಡ್ಡಾಯವಾಗಿ ಪಾಸ್ ಪಡೆದಿರಬೇಕು. ಪಾಸ್​​​​ನಲ್ಲಿ ವಕೀಲರು ನಿರ್ದಿಷ್ಟ ಪ್ರಕರಣದಲ್ಲಿ ಸಾಕ್ಷ್ಯ ದಾಖಲಿಸುವ ಕುರಿತು ಉಲ್ಲೇಖಿಸಿರಬೇಕು ಎಂಬ ಮಾರ್ಗಸೂಚಿ ಹೊರಡಿಸಲಾಗಿದೆ.

ಇದನ್ನೂ ಓದಿ:ಸಂಗೀತ ವಿವಿ ಕುಲಪತಿ ನೇಮಕ ವಿವಾದ: ಡಾ. ನಾಗೇಶ್ ಬೆಟ್ಟಕೋಟೆ ವಿವರಣೆ ಕೇಳಿದ ಹೈಕೋರ್ಟ್

ABOUT THE AUTHOR

...view details