ಬೆಂಗಳೂರು:ಲಾಕ್ಡೌನ್ನಿಂದಾಗಿ ಕೋರ್ಟ್ಗಳು ಸ್ಥಗಿತಗೊಂಡು ಕಳೆದೆರಡು ತಿಂಗಳಿಂದ ಸಂಪಾದನೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರು, ಕ್ಲರ್ಕ್‍ಗಳಿಗೆ ಆರ್ಥಿಕ ನೆರವು ನೀಡಲು ಹಣ ಸಂಗ್ರಹಿಸಿ ಕೊಡುವಂತೆ ಬೆಂಗಳೂರು ವಕೀಲರ ಸಂಘಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಈ ವಿಚಾರವಾಗಿ ಕರ್ನಾಟಕ ರಾಜ್ಯ ವಕೀಲರು, ಕ್ಲರ್ಕ್‍ಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಮೂರ್ತಿ ಎಸ್. ನಾಯಕ್ ವಾದ ಮಂಡಿಸಿ ಸಂಕಷ್ಟದಲ್ಲಿರುವ ಕ್ಲರ್ಕ್ ಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘಗಳಿಗೆ ಸೂಚಿಸಬೇಕು ಎಂದು ಕೋರಿದರು.