ಕರ್ನಾಟಕ

karnataka

ETV Bharat / state

ಮಂತ್ರಿ ಡೆವಲಪರ್ಸ್​ನಿಂದ ಮನೆ ಖರೀದಿಗೆ ಸಾಲ ಪಡೆದವರ ಸಿಬಿಲ್​ ಸ್ಕೋರ್ ಮರು ಸ್ಥಾಪಿಸಲು ಹೈಕೋರ್ಟ್​ ಸೂಚನೆ - ಒಪ್ಪಂದದಲ್ಲಿ ಸಾಲ ಮಾಡಿದ್ದವರ ವಿರುದ್ಧ ವಸೂಲಾತಿ

ತ್ರಿಪಕ್ಷೀಯ ಒಪ್ಪಂದದ ಮೂಲಕ ಮಂತ್ರಿ ಡೆವಲಪರ್ಸ್​ನಿಂದ ಮನೆ ಖರೀದಿಗೆ ಸಾಲ ಪಡೆದವರ ಸಿಬಿಲ್​ ಸ್ಕೋರ್ ಮರು ಸ್ಥಾಪಿಸಲು ಹೈಕೋರ್ಟ್​ ಸೂಚನೆ ನೀಡಿದೆ.

High Court
ಹೈಕೋರ್ಟ್​ ಸೂಚನೆ

By

Published : Sep 20, 2022, 8:07 PM IST

ಬೆಂಗಳೂರು:ಮಂತ್ರಿ ಡೆವಲಪರ್ಸ್​ ಪ್ರೈವೇಟ್​ ಲಿಮಿಟೆಡ್​ನಿಂದ ಮನೆ ಖರೀದಿಸಲು ತ್ರಿಪಕ್ಷೀಯ ಒಪ್ಪಂದದ ಮೂಲಕ ಸಾಲ ಮಾಡಿದ್ದ 31 ಮಂದಿಯ ಸಿಬಿಲ್​ ಸ್ಕೋರ್​ನ್ನು ಮುಂದಿನ 60 ದಿನಗಳಲ್ಲಿ ಮರು ಸ್ಥಾಪಿಸುವಂತೆ ಕ್ರೆಡಿಟ್ ಇನ್ಫರ್ಮೇಷನ್​ ಬ್ಯೂರೋ(ಸಿಬಿಲ್)ಗೆ ಹೈಕೋರ್ಟ್​ ಸೂಚನೆ ನೀಡಿದೆ.

ಮಂತ್ರಿ ಡೆವಲಪರ್ಸ್​ ಪ್ರೈವೇಟ್​ನಿಂದ ಮನೆ ಖರೀದಿಗಾಗಿ ಪಂಜಾಂಬ್​ ನ್ಯಾಷನಲ್​ ಬ್ಯಾಂಕ್​ ಹೌಸಿಂಗ್​ ಫೈನಾನ್ಸ್​ ಲಿಮಿಟೆಡ್(ಪಿಎನ್​ಬಿಎಚ್​ಎಫ್​ಎಲ್)ನಿಂದ ತ್ರಿಪಕ್ಷೀಯ ಒಪ್ಪಂದದಲ್ಲಿ ಸಾಲ ಮಾಡಿದ್ದವರ ವಿರುದ್ಧ ವಸೂಲಾತಿ ಪ್ರಕ್ರಿಯೆ ಮುಂದಾಗಿದ್ದ ಬ್ಯಾಂಕ್​ನ ಕ್ರಮ ಪ್ರಶ್ನಿಸಿ ಲಂಡನ್​ನಿವಾಸಿಗಳಾದ ಅರವಿಂದ ಸಂತಾನಂ ಪ್ರಸಾದ್​ ಸೇರಿದಂತೆ ಇತರ 30 ಮಂದಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್​ ಅವರಿದ್ದ ನ್ಯಾಯಪೀಠ, ತ್ರಿಪಕ್ಷೀಯ ಒಪ್ಪಂದ ಮೂಲಕ ಸಾಲ ಮಾಡಿ ಮಂತ್ರಿ ಡೆವಲಪರ್ಸ್​ಗೆ ಪಾವತಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಸೂಚಿಸಿದೆ.

ಜತೆಗೆ, ಮನೆ ಖರೀದಿಗಾಗಿ ಸಾಲ ಮಾಡಿ ಹಣ ಪಾವತಿಸಿರುವ ಗ್ರಾಹಕರ ಈಗಾಗಲೇ ರಿಯಲ್​ ಎಸ್ಟೇಟ್​ ನಿಯಂತ್ರಣಾ ಪ್ರಾಧಿಕಾರ(ರೇರಾ)ಕ್ಕೆ ಮನವಿ ಮಾಡಿದ್ದಾರೆ. ಮನೆ ಖರೀದಿದಾರರ ಹೆಸರಿನಲ್ಲಿ ಪಡೆದಿರುವ ಹಣ ಹಿಂದಿರುಗಿಸುವಂತೆ ರೇರಾ ಹೀಗಾಗಲೇ ಮಂತ್ರಿ ಡೆವಲಪರ್ಸ್​ಗೆ ನಿರ್ದೇಶನ ನೀಡಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಸಾಲಗಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಪಿಎನ್​ಬಿಎಚ್​ಎಫ್​ಎಲ್ ಮತ್ತು ಸಿಬಿಲ್​ಗೆ ನಿರ್ದೇಶನ ನೀಡಿದ್ದರೂ ರೇರಾ ನೀಡಿರುವ ಆದೇಶವನ್ನು ಜಾರಿ ಮಾಡಬೇಕು ಎಂದು ಮಂತ್ರಿ ಡೆವಲಪರ್ಸ್​ಗೆ ಸೂಚಿಸಿದೆ. ಅಲ್ಲದೇ, ತ್ರಿಪಕ್ಷಿಯಾ ಒಪ್ಪಂದದ ಪ್ರಕಾರ ಮನೆ ಖರೀದಿದಾರರು ಪಡೆದ ಸಾಲವನ್ನು ಮಂತ್ರಿ ಡೆವಲಪರ್ಸ್​ಗೆ ಪಾವತಿಸಿದ್ದಾರೆ. ಹೀಗಿರುವಾಗ ಸಾಲ ಮರು ಪಾವತಿಸುವಂತೆ ಪಿಎನ್​ಬಿಎಚ್​ಎಫ್​ಎಲ್​ ಅಧಿಕಾರಿಗಳು ಒತ್ತಡ ಹೇರುವಂತಿಲ್ಲ ಎಂದು ಪೀಠ ತಿಳಿಸಿದೆ.

ಪಿಎನ್​ಬಿಎಚ್​ಎಫ್​ಎಲ್ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಸಾಲಗಾರರು ಮತ್ತು ಡೆವಲಪರ್​ ಸಂಸ್ಥೆ ಜಂಟಿಯಾಗಿ ಜವಾಬ್ದಾರಿಯನ್ನು ಹೊರುತ್ತಾರೆ. ಹೀಗಾಗಿ ಮಂತ್ರಿ ಡೆವಲಪರ್ಸ್​ನಿಂದ ಸಾಲ ವಸೂಲಿ ಮಾಡುವುದಕ್ಕೆ ಪಿಎನ್​ಬಿಎಚ್​ಎಫ್​ಎಲ್​ಗೆ ಮುಕ್ತ ಅವಕಾಶವಿರಲಿದೆ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಇದನ್ನೂ ಓದಿ :ಎರಡು ಸಾವಿರ ಬಟ್ಟೆಯನ್ನು ಕೆಡೆಸಿದ್ದ ಟೈಲರ್‌ಗೆ 10 ಸಾವಿರ ದಂಡ

ABOUT THE AUTHOR

...view details