ಕರ್ನಾಟಕ

karnataka

ETV Bharat / state

ಭಿಕ್ಷಾಟನೆ ತಡೆ ಕಾಯಿದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ನ್ಯಾಯಪೀಠ

ಕರ್ನಾಟಕ ಭಿಕ್ಷಾಟನೆ ತಡೆ ಕಾಯಿದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ಲೆಟ್ಜ್ಕಿಟ್ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ,ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ , ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠದಿಂದ ತೀರ್ಪು

high court
ಹೈಕೋರ್ಟ್​

By

Published : Feb 15, 2023, 10:04 PM IST

ಬೆಂಗಳೂರು: ಭಿಕ್ಷಾಟನೆ ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಭಿಕ್ಷಾಟನೆ ತಡೆ ಕಾಯಿದೆ 1975ರ ಸೆಕ್ಷನ್ 11ರ ಅಧಿನಿಯಮವನ್ನೂ ಪರಿಣಾಮಕಾರಿ ಜಾರಿ ಮಾಡಲು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ರಸ್ತೆ ಬದಿಗಳಲ್ಲಿ ಮಕ್ಕಳು ಆಟಿಕೆಗಳು ಮಾಡುವುದು ಮತ್ತು ಭಿಕ್ಷಾಟನೆ ನಡೆಸುವುದನ್ನು ನಿಯಂತ್ರಿಸುವಂತೆ ಕೋರಿ ಬೆಂಗಳೂರು ನಗರದ ಲೆಟ್ಜ್ಕಿಟ್ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್ ಕಿಣಗಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಭಿಕ್ಷಾಟನೆ ತಡೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ:ಭಿಕ್ಷಾಟಣೆ ತಡೆಗೆ ಸಂಬಂಧಿಸಿದಂತೆ ಕಾಯಿದೆಯಲ್ಲಿರುವ ಅಂಶಗಳ ಕುರಿತಂತೆ ಹಲವು ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾಗಿದೆ. ಆದ್ದರಿಂದ ಕರ್ನಾಟಕ ಭಿಕ್ಷಾಟನೆ ತಡೆ ಕಾಯಿದೆ 1975ರ ಸೆಕ್ಷನ್ 11 ಅಧಿನಿಯಮನ್ನು ಪರಿಣಾಮಕಾರಿ ಜಾರಿ ಮಾಡುವ ಸಂಬಂಧ ರಾಜ್ಯ ಪೊಲೀಸ್ ಇಲಾಖೆ ಸನ್ನದ್ಧನಾಗಬೇಕು.

ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಎಲ್ಲ ಮಹಾನಗರಗಳ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ನಗರದ ಎಲ್ಲ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರು, ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಹಿರಿಯ ಪೊಲೀಸ್​ ಅಧಿಕಾರಿಗಳು ರಾಜ್ಯದ ಎಲ್ಲ ಪೊಲೀಸ್ ಠಾಣಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಿ, ಭಿಕ್ಷಾಟನೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಭಿಕ್ಷುಕರ ಸೆಸ್ ಬಾಕಿ , ಪಾವತಿಸಲು ಸೂಚನೆ:ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಈ ವರೆಗೂ 19.27 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗಿದೆ. ಇನ್ನುಳಿದ 29.51 ಲಕ್ಷ ರು.ಗಳು ಬಾಕಿ ಉಳಿಸಿಕೊಂಡಿದ್ದು, ಪಾವತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರವನ್ನು ಸಲ್ಲಿಸಿತು.
ಬಿಬಿಎಂಪಿ ಪರ ವಕೀಲರು, ಸುಮಾರು 139 ಕೋಟಿ ರೂ.ಗಳ ಭಿಕ್ಷುಕರ ಸೆಸ್ ಬಾಕಿ ಉಳಿಸಿಕೊಂಡಿದೆ. 10 ಕೋಟಿ ರೂಪಾಯಿಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಿದೆ ಎಂದು ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ಮೂರು ವಾರಗಳಲ್ಲಿ ಬಾಕಿ ಉಳಿಸಿಕೊಂಡಿರುವ ಭಿಕ್ಷುಕರ ಸೆಸ್‌ನ್ನು ಪಾವತಿ ಮಾಡಬೇಕು ಎಂದು ಸೂಚಸಿ, ವಿಚಾರಣೆ ಮುಂದೂಡಿತು.

ಈ ಹಿಂದೆ ನಡೆದ ವಿಚಾರಣೆ ವೇಳೆ, ಮಕ್ಕಳು ಭಿಕ್ಷಾಟನೆಯಿಂದ ದೂರಾಗಿರಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಾದೇಶಿಕ ವಾಹಿನಿಗಳಾದ ದೂರದರ್ಶನ, ಖಾಸಗಿ ವಾಹಿನಿಗಳು, ಕೇಬಲ್ ಚಾನೆಲ್‌ಗಳಲ್ಲಿ ಕಾಲ ಕಾಲಕ್ಕೆ ಪ್ರದರ್ಶನ ಮಾಡುವುದಕ್ಕೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು. ಅದರ ಅನುಷ್ಠಾನ ಮಾಡುವುದನ್ನು ಗಮನಿಸುತ್ತಿರಬೇಕು ಎಂದು ಸಲಹೆ ನೀಡಿ, ಈ ಪ್ರಕ್ರಿಯೆ ಮುಂದುವರೆಸಲು ಹೈಕೋರ್ಟ್ ಸೂಚನೆ ನೀಡಿತು.
ಇದನ್ನೂಓದಿ:ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅನುಷ್ಟಾನದಲ್ಲಿ ಸರ್ಕಾರದ ನಿರ್ಲಕ್ಷ್ಯ: ಹೈಕೋರ್ಟ್ ತರಾಟೆ

ABOUT THE AUTHOR

...view details