ಕರ್ನಾಟಕ

karnataka

ETV Bharat / state

ಮೈಸೂರಿನ ಪಾರಂಪರಿಕ ಕಟ್ಟಡಗಳ ನೆಲಸಮ ನಿರ್ಧಾರ ಪ್ರಶ್ನಿಸಿದ ಅರ್ಜಿ ವಜಾ - ಈಟಿವಿ ಭಾರತ್​ ಕನ್ನಡ ನ್ಯೂಸ್

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ದೇವರಾಜ ಮಾರುಕಟ್ಟೆ, ಲ್ಯಾನ್ಸ್​ಡೌನ್​ ಕಟ್ಟಡಗಳ ನೆಲಸಮ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Aug 28, 2023, 8:43 PM IST

ಬೆಂಗಳೂರು : ಮೈಸೂರಿನ ಪುರಾತನ ಕಟ್ಟಡಗಳಾಗಿರುವ ದೇವರಾಜ ಮರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡವನ್ನು ನೆಲಸಮ ಮಾಡುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಪುರಾತನ ಕಟ್ಟಡಗಳನ್ನು ಉಳಿಸುವಂತೆ ಸೂಚನೆ ನೀಡಬೇಕು ಎಂದು ಕೋರಿ ಮೈಸೂರಿನ ನಾಗರೀಕರಾದ ಡಿ. ಶ್ರೀಜೈನಾಗರಾಜೇ ಅರಸ್​, ಜಿ. ಸತ್ಯನಾರಾಯಣ, (ಗೌರಿ ಸತ್ಯ), ಎಸ್​.ನಿರಂಜನ್ ನಿಕಂ ಮತ್ತು ಆರ್. ರಾಜಚಂದ್ರ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್​ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.

ಮೈಸೂರು ಜಿಲ್ಲಾಧಿಕಾರಿಗಳಿಂದ ರಚನೆಯಾಗಿರುವ ಟಾಸ್ಕ್​ ಫೋರ್ಸ್ ಸಮಿತಿ ಮತ್ತು ವಿಶೇಷ ಪುರಾತನ ಕಟ್ಟಡಗಳ ಪರಿಶೀಲನಾ ಸಮಿತಿಯು ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವು ಮಾಡುವಂತೆ ಶಿಫಾರಸು ಮಾಡಿದೆ. ಈ ರೀತಿಯ ವಿಚಾರಗಳಲ್ಲಿ ಪರಿಣತಿ ಹೊಂದಿಲ್ಲದ ನ್ಯಾಯಾಲಯಗಳು ಅಭಿಪ್ರಾಯ ವ್ಯಕ್ತಪಡಿಸಲಾಗದು. ಅಲ್ಲದೆ, ಜಾಗರೂಕತೆಯಿಂದ ನಿರ್ವಹಿಸಬೇಕಾಗಿದೆ. ಜತೆಗೆ, ಜಿಲ್ಲಾಧಿಕಾರಿಗಳು ರಚನೆ ಮಾಡಿದ್ದ ಸಮಿತಿ, ದೇವರಾಜ ಮಾರುಕಟ್ಟೆ ಸ್ಥಳವನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕಟ್ಟಡಗಳನ್ನು ನವೀಕರಣ ಮಾಡುವುದು ಸೂಕ್ತವಲ್ಲ. ಇವುಗಳನ್ನು ತೆರವುಗೊಳಿಸುವುದೇ ಉತ್ತಮ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ದೇವರಾಜ ಮಾರುಕಟ್ಟೆ ಕಟ್ಟಡದ ಒಂದು ಭಾಗವು ಪುನರ್​ನಿರ್ಮಾಣ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದಿದೆ. ಮಾರುಕಟ್ಟೆ ಕಟ್ಟಡಕ್ಕೆ ಮುಂದಿನ ದಿನಗಳಲ್ಲಿ ಅಪಾಯವಿದೆ ಎಂದು ಸಮಿತಿ ತಿಳಿಸಿದೆ. ಆದರೆ, ನ್ಯಾಯಾಲಯವು ಸಮಿತಿಯ ಶಿಫಾರಸುಗಳನ್ನು ಬದಿಗಿರಿಸಿ ನಿರ್ಧಾರವನ್ನು ಪ್ರಕಟ ಮಾಡುವುದಕ್ಕೆ ಸಾಧ್ಯವಿಲ್ಲ. ಈ ರೀತಿಯ ವಿಚಾರಗಳಲ್ಲಿ ನ್ಯಾಯಾಲಯಗಳು ಪರಿಣತಿಯನ್ನು ಹೊಂದಿಲ್ಲ. ಇಂತಹ ಸಂದರ್ಭದಲ್ಲಿ ಸಮಯದಲ್ಲಿ ತಜ್ಞರು ನೀಡಿರುವ ಅಭಿಪ್ರಾಯ ವ್ಯಕ್ತಪಡಿಸಿರುವಾಗ ಜಾಗರೂಕತೆಯಿಂದ ನಿರ್ವಹಿಸಬೇಕು ಎಂದು ಅಭಿಪ್ರಾಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಕಟ್ಟಡಗಳು ದುಸ್ಥಿತಿಗೆ ತಲುಪಿದ್ದ ಸಂದರ್ಭದಲ್ಲಿ ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಒಂದು ಭಾಗ ಶಿಥಿಲಗೊಂಡಿತ್ತು. ಜತೆಗೆ ಪುನಶ್ಚೇತನ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತಿಳಿಸಲಾಗಿತ್ತು. ಆದಾಗ್ಯೂ ಮೈಸೂರು ಜಿಲ್ಲಾಧಿಕಾರಿಗಳು ಈ ಕಟ್ಟಡಗಳ ಪರಿಶೀಲನೆಗೆ ಸಮಿತಿ ರಚನೆ ಮಾಡಿ ಅಭಿಪ್ರಾಯವನ್ನು ಪಡೆದುಕೊಂಡಿದ್ದರು.

ಅರ್ಜಿಯದಾರರ ವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್​ ಅವರು ಮೈಸೂರು ರಾಜ್ಯವನ್ನು ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಿದ್ದರು. ಎರಡೂ ಕಟ್ಟಡಗಳು ಸುಮಾರು 130 ವರ್ಷಗಳಿಗೂ ಹಳೆಯದಾಗಿದ್ದು, ಈ ಕಟ್ಟಡಗಳನ್ನು ಮೈಸೂರು ಅರಮನೆ ಮತ್ತು ಕೋಟೆಗೆ ಪೂರಕವಾಗಿ ನಿರ್ಮಾಣ ಮಾಡಲಾಗಿತ್ತು. ಈ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅರ್ಜಿಯದಾರರು ವಾದ ಮಂಡಿಸಿದ್ದರು.

ಇದನ್ನೂ ಓದಿ :ಕೇಂದ್ರದ ಪರಿಶೀಲನೆಗೊಳಪಟ್ಟ ಬಳಿಕ ವಿದೇಶಿ ನೆರವು ಬಿಡುಗಡೆ : ಹೈಕೋರ್ಟ್

ABOUT THE AUTHOR

...view details