ಕರ್ನಾಟಕ

karnataka

ETV Bharat / state

ಮೆಟ್ರೋ ಯೋಜನೆಯಲ್ಲಿ ಷರತ್ತುಗಳ ಉಲ್ಲಂಘನೆ ಆರೋಪ : ಐಐಎಂ ನೇಮಿಸಲು ಹೈಕೋರ್ಟ್ ನಿರ್ದೇಶನ - ಬೆಂಗಳೂರು ಮೆಟ್ರೋ ರೈಲು ನಿಗಮ

ಮೆಟ್ರೋ ಯೋಜನೆಯಲ್ಲಿ ಷರತ್ತುಗಳ ಉಲ್ಲಂಘನೆ ಆರೋಪ ಬಗ್ಗೆ ಪರಿಸರವಾದಿ ಡಿ.ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್​ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​​ ವಿಚಾರಣೆ ನಡೆಸಿತು. ಮೆಟ್ರೋ ಯೋಜನೆಯನ್ನು ಪರಿಶೀಲಿಸಿ ವರದಿ ನೀಡಲು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯನ್ನು ನೇಮಕ ಮಾಡುವಂತೆ ಹೈಕೋರ್ಟ್ ಬಿಎಂಆರ್​​ಸಿಎಲ್​ಗೆ ನಿರ್ದೇಶಿಸಿದೆ.

ಹೈಕೋರ್ಟ್
High Court

By

Published : Apr 1, 2021, 2:22 PM IST

ಬೆಂಗಳೂರು:ಮೆಟ್ರೋ ರೈಲು ಯೋಜನೆಯ ಮೊದಲು ಹಾಗೂ ಎರಡನೇ ಹಂತಗಳಲ್ಲಿ ಕೇಂದ್ರದ ನಿಯಮಗಳನ್ನು ಪಾಲಿಸಿರುವ ಕುರಿತು ಪರಿಶೀಲನಾ ವರದಿ ನೀಡಲು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯನ್ನು (ಐಐಎಂಬಿ) ನೇಮಕ ಮಾಡುವಂತೆ ಹೈಕೋರ್ಟ್ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್​​ಸಿಎಲ್) ನಿರ್ದೇಶಿಸಿದೆ.

ಮೆಟ್ರೋ ಯೋಜನೆ ಜಾರಿಗೆ ಮುನ್ನಾ ಕೇಂದ್ರ ಸರ್ಕಾರ ವಿಧಿಸಿದ್ದ ನಿಯಮಗಳನ್ನು ಯೋಜನೆ ಅನುಷ್ಠಾನದ ವೇಳೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಪರಿಸರವಾದಿ ಡಿ.ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್​ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಪೀಠ ತನ್ನ ನಿರ್ದೇಶನದಲ್ಲಿ ನಮ್ಮ ಮೆಟ್ರೋ ಮೊದಲನೇ ಮತ್ತು ಎರಡನೇ ಹಂತಗಳ ಕಾಮಗಾರಿಗಳಿಗೆ ಸಂಬಂಧ ಎಲ್ಲಾ ದಾಖಲೆಗಳನ್ನು ಬಿಎಂಆರ್​​​ ಸಿಎಲ್ ಅಧಿಕಾರಿಗಳು ಐಐಎಂಗೆ ಒಗದಿಸಬೇಕು. ಈ ದಾಖಲೆಗಳು ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳನ್ನು ತಪಾಸಣೆ ಮಾಡಬೇಕು. ಒಪ್ಪಂದದ ನಿಯಮಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಐಐಎಂ ವರದಿ ನೀಡಬೇಕು ಎಂದು ನಿರ್ದೇಶಿಸಿದೆ.

ಓದಿ: ಹೈಕಮಾಂಡ್​ಗೆ ಈಶ್ವರಪ್ಪ ದೂರು ನೀಡಿದ್ದು ಶೋಭೆ ತರುವಂತಹದಲ್ಲ- ಬಿ.ಸಿ. ಪಾಟೀಲ್ ಬೇಸರ​​

ಅರ್ಜಿದಾರರು ನಮ್ಮ ಮೆಟ್ರೋ ಮೊದಲನೇ ಹಂತಕ್ಕೆ 2006ರ ಮೇ 11ರಂದು ಮಂಜೂರಾತಿ ನೀಡಿ, 2010ರ ಡಿ.24ರಂದು ಒಪ್ಪಂದಕ್ಕೆ ಬಿಎಂಆರ್ ಸಿಎಲ್ ಸಹಿ ಹಾಕಿತ್ತು. ಎರಡನೇ ಹಂತದ ಯೋಜನೆಗೆ 20114ರ ಫೆ.21ರಂದು ಮಂಜೂರಾತಿ ನೀಡಿ 2017ರ ಫೆ.24ರಂದು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಗಳಲ್ಲಿ ಹೇಳಲಾಗಿದ್ದ ಸಮಗ್ರ ಸಾರಿಗೆ ಯೋಜನೆ ಹಾಗೂ ಸಂಚಾರ ವ್ಯವಸ್ಥೆಯ ಸುಧಾರಣೆ ಕುರಿತ ಯೋಜನೆಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಒಪ್ಪಂದದಂತೆ ಯೋಜನೆಗಳನ್ನು ರೂಪಿಸಲು ಸರ್ಕಾರ ಹಾಗೂ ಬಿಎಂಆರ್​ಸಿಎಲ್​​ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details