ಕರ್ನಾಟಕ

karnataka

ETV Bharat / state

ನಟನೆಗೆ ಅವಕಾಶ ಕೊಡಿಸೋದಾಗಿ ಹೇಳಿ ಅತ್ಯಾಚಾರ... ಆರೋಪಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು - undefined

ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಹೈಕೋರ್ಟ್

By

Published : May 22, 2019, 5:14 AM IST

ಬೆಂಗಳೂರು: ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಷರತ್ತಿನಲ್ಲಿ ಆರೋಪಿಗೆ 2 ಲಕ್ಷ ರೂ. ಬಾಂಡ್ ಇಬ್ಬರ ಶ್ಯೂರಿಟಿ ಒದಗಿಸಬೇಕು, ಸಾಕ್ಷಿ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಕುಮಾರ್ ಗೌರವ್ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದರು. ಯುವತಿಗೆ ಗೌರವ್‌ 2016 ರ ನವೆಂಬರ್‌ನಲ್ಲಿ ಪರಿಚಯವಾಗಿ ನಂತರ ತನ್ನ ನಿರ್ಮಾಣದ ಸಿನಿಮಾದಲ್ಲಿ ಯುವತಿಗೆ ಸಣ್ಣದೊಂದು ಪಾತ್ರ ಕೊಡಿಸಿದ್ದರು. ಮುಂದೆಯೂ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಒಂದು ದಿನ ಮನೆಗೆ ಕರೆದುಕೊಂಡು ಹೋಗಿ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಂತರ ಪದೆ ಪದೇ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದ ಯುವತಿ ಕುಮಾರಸ್ವಾಮಿ ಲೇಔಟ್​ ಪೊಲೀಸರಿಗೆ ದೂರು ನೀಡಿದ್ರು. ಈ ದೂರಿನನ್ವಯ ಪೊಲೀಸರು ಮಾ.28 ರಂದು ಕುಮಾರ್ ಗೌರವ್‌ನನ್ನು ಬಂಧಿಸಿದ್ದರು. ನಂತರ ಅಧೀನ‌ ನ್ಯಾಯಲಯ ಈತನಿಗೆ ಶಿಕ್ಷೆ ವಿಧಿಸಿ ಜಾಮೀನು ಅರ್ಜಿ‌ ವಜಾ‌ ಮಾಡಿತ್ತು. ಇದೀಗ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

For All Latest Updates

TAGGED:

ABOUT THE AUTHOR

...view details