ಕರ್ನಾಟಕ

karnataka

ETV Bharat / state

ಅಪ್ರಾಪ್ತರ ನಡುವಿನ ಲೈಂಗಿಕ ಅಪರಾಧ: ರಾಜಿ ಹಿನ್ನೆಲೆ ಪ್ರಕರಣ ಮುಕ್ತಾಯಗೊಳಿಸಿದ ಹೈಕೋರ್ಟ್​ - ಅಪ್ರಾಪ್ತರ ನಡುವಿನ ಲೈಂಗಿಕ ಅಪರಾಧ

ಉಭಯ ಪಕ್ಷಗಾರರು ಸಂಧಾನಕ್ಕೆ ಒಪ್ಪಿದ ಹಿನ್ನೆಲೆಯಲ್ಲಿ ಪೋಕ್ಸೋ​ ಕಾಯ್ದೆ ಅಡಿ ದಾಖಲಾದ ಅಪ್ರಾಪ್ತರ ನಡುವಿನ ಲೈಂಗಿಕ ಅಪರಾಧ ಆರೋಪ ಪ್ರಕರಣವನ್ನು ಹೈಕೋರ್ಟ್ ಮುಕ್ತಾಯಗೊಳಿಸಿದೆ.

high-court-closed-minor-sex-crime-case-after-negotiation
ಅಪ್ರಾಪ್ತರ ನಡುವಿನ ಲೈಂಗಿಕ ಆಪರಾಧ : ರಾಜಿ ಹಿನ್ನೆಲೆ ಪ್ರಕರಣ ಮುಕ್ತಾಯಗೊಳಿಸಿದ ಹೈಕೋರ್ಟ್​

By

Published : Sep 9, 2022, 7:56 PM IST

ಬೆಂಗಳೂರು:ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೋ​ ಕಾಯ್ದೆ) ಅಡಿ ದಾಖಲಾದ ಪ್ರಕರಣವೊಂದರಲ್ಲಿ ಉಭಯ ಪಕ್ಷಗಾರರು ನಡುವಿನ ಸಂಧಾನಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆ ಪ್ರಕರಣವನ್ನು ಹೈಕೋರ್ಟ್ ಮುಕ್ತಾಯಗೊಳಿಸಿದೆ.

ಬೆಂಗಳೂರಿನ ಆರ್​​ಟಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ವಜಾ ಮಾಡುವಂತೆ ಕೋರಿ ಆರೋಪಿತ ಬಾಲಕ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆಯು ಹೈಕೋರ್ಟ್​ನಲ್ಲಿ ನಡೆದಿತ್ತು. ಜೂನ್ 17ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ಪ್ರಕಟಿಸಿದೆ.

ಅಪ್ರಾಪ್ತರ ನಡುವಿನ ಲೈಂಗಿಕ ಪ್ರಕರಣಗಳನ್ನು ಸಂವಿಧಾನಾತ್ಮಕ ಪೀಠ ರದ್ದು ಪಡಿಸಿದೆ. ಪ್ರಕರಣದಲ್ಲಿ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ವ್ಯಾಮೋಹಕ್ಕೊಳಗಾಗಿ ಈ ರೀತಿಯ ಕತ್ಯಗಳಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಒತ್ತಾಯದ ಮೇರೆಗೆ ಈ ಚಟುವಟಿಕೆಗಳಲ್ಲಿ ನಡೆಸಿಲ್ಲ. ಅಷ್ಟೇ ಅಲ್ಲದೆ, ಇಬ್ಬರೂ ಅಪ್ರಾಪ್ತರಾಗಿದ್ದಾರೆ ಎಂದು ಕೋರ್ಟ್​ ಹೇಳಿದೆ.

ಅಲ್ಲದೆ, ಆರೋಪಿತ ವಿದ್ಯಾರ್ಥಿ 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಉಭಯ ಪಕ್ಷಗಾರರು ಸಂಧಾನಕ್ಕೆ ಒಪ್ಪಿರುವುದರಿಂದ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಅಡಿ ಬಾಲಕನ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸುತ್ತಿರುವುದಾಗಿ ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಸಂಬಂಧ ವಾದ ಮಂಡಿಸಿದ ವಕೀಲ ಪ್ರತೀಕ್ ಚಂದ್ರಮೌಳಿ, ಆಕ್ಷೇಪಾರ್ಹವಾದ ಅಪರಾಧಗಳು ವ್ಯಕ್ತಿಗತವಾಗಿದ್ದು, ಇದು ಇಬ್ಬರು ಅಪ್ರಾಪ್ತರ ನಡುವಿನ ವಿವಾದವಾಗಿದೆ. ಕಾನೂನಿನ ಪ್ರಕ್ರಿಯೆ ವಜಾ ಮಾಡುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ. ಬದಲಿಗೆ ಅರ್ಜಿದಾರರು ಮತ್ತು ಅಪ್ರಾಪ್ತ ಸಂತ್ರಸ್ತೆಯು ಉತ್ತಮ ಬದುಕು ರೂಪಿಸಿಕೊಳ್ಳಲು ಅನುವಾಗಲಿದೆ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ:ನೂಪುರ್ ಶರ್ಮಾ ಬಂಧಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪ್ರಕರಣದ ಹಿನ್ನೆಲೆ:2021ರ ನವೆಂಬರ್ 21ರಂದು ಬಾಲಕಿಯ ತಂದೆಯು ಕಾಲೇಜಿಗೆ ತೆರಳಿದ್ದ ಬಾಲಕಿ ಮನೆಗೆ ಮರಳಿಲ್ಲ ಎಂದು ಆರ್​​ಟಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು. ಅರ್ಜಿದಾರ ಬಾಲಕ ಮತ್ತು ಬಾಲಕಿಯ ಫೋನ್​ಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಅವರಿಬ್ಬರೂ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಸ್​ನಲ್ಲಿ ಹಿಂದಿರುಗುವಾಗ ಪತ್ತೆ ಹಚ್ಚಿದ್ದರು.

ಆ ನಂತರ ಪೊಲೀಸರು ಬಾಲಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಮೂರು ದಿನ ವಶಕ್ಕೆ ಪಡೆದಿದ್ದರು. ಇದೇ ರೀತಿ ಬಾಲಕನ ತಂದೆ ಅದೇ ಠಾಣೆಯಲ್ಲಿ ಪುತ್ರ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಜೊತೆಗೆ, ಜಾಮೀನು ಮಂಜೂರಾಗಿತ್ತು. ಇದೀಗ ಹೈಕೋರ್ಟ್​ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಇದನ್ನೂ ಓದಿ:ಸರ್ಕಾರದ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಟ್ವಿಟರ್​ಗೆ ಹೈಕೋರ್ಟ್​ ಕಾಲಾವಕಾಶ

ABOUT THE AUTHOR

...view details