ಕರ್ನಾಟಕ

karnataka

ETV Bharat / state

ಕೇಂದ್ರದ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ - ಡಿಜಿಟಲ್ ನ್ಯೂಸ್ ಮೀಡಿಯಾ

ಮೂಲ ಐಟಿ ಕಾಯ್ದೆ ವ್ಯಾಪ್ತಿಗೊಳಪಡದ ಸಂಸ್ಥೆಗಳನ್ನೂ ಸಹ ಶಾಸನಾತ್ಮಕವಾಗಿ ಕಟ್ಟಿ ಹಾಕಲು ಕೇಂದ್ರ ಮುಂದಾಗಿದೆ. ಐಟಿ ಕಾಯ್ದೆಯಲ್ಲಿ ಡಿಜಿಟಲ್ ನ್ಯೂಸ್ ಮೀಡಿಯಾಗಳನ್ನು ಪ್ರತ್ಯೇಕ ವಿಭಾಗದಲ್ಲಿ ಗುರುತಿಸಿಲ್ಲ ಮತ್ತು ಅವುಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಹೊಸ ನಿಯಮಗಳಲ್ಲಿ ಅನಗತ್ಯವಾದ ಹಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದೆ..

high-court-
ಹೈಕೋರ್ಟ್​ಗೆ ಅರ್ಜಿ

By

Published : Apr 3, 2021, 10:47 PM IST

ಬೆಂಗಳೂರು :ಡಿಜಿಟಲ್ ನ್ಯೂಸ್ ಮೀಡಿಯಾಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚಿಗೆ ಪ್ರಕಟಿಸಿರುವ ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ ಗೈಡ್‌ಲೈನ್ಸ್ ಅಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮ 2021ನ್ನು ಪ್ರಶ್ನಿಸಿ ನಗರದ ಟ್ರೂತ್ ಪ್ರೊ ಫೌಂಡೇಷನ್ ಇಂಡಿಯಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ಓದಿ: ಯುವರತ್ನನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

ಕನ್ನಡದಲ್ಲಿ ನ್ಯೂಸ್ ಪೋರ್ಟಲ್ ನಡೆಸುತ್ತಿರುವ ಸಂಸ್ಥೆ ಸಲ್ಲಿಸಿರುವ ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ 'ಮಾಹಿತಿ ತಂತ್ರಜ್ಞಾನ ಕಾಯ್ದೆ-2000'ಕ್ಕೆ ವಿರುದ್ಧವಾಗಿದೆ. ಸಂಹಿತೆಯಲ್ಲಿ ಪ್ರಸ್ತಾಪಿಸಲಾಗಿರುವ ಉತ್ತಮ ಅಭಿರುಚಿ, ಸಭ್ಯತೆ ಮೊದಲಾದ ಷರತ್ತುಗಳ ಮೂಲಕ ಡಿಜಿಟಲ್ ಸುದ್ದಿ ಸಂಸ್ಥೆಗಳನ್ನು ನಿಯಂತ್ರಿಸುವ ಲೆಕ್ಕಾಚಾರವಿದೆ. ಡಿಜಿಟಲ್ ನ್ಯೂಸ್ ಪೋರ್ಟ್‌ಲ್ ಸೇರಿದಂತೆ ಓಟಿಟಿ ವೇದಿಕೆಗಳನ್ನು ನಿಯಂತ್ರಿಸುವ ಈ ಕಾಯ್ದೆ ಕಾನೂನು ಬಾಹಿರ ಎಂದು ಸಂಸ್ಥೆ ಆಕ್ಷೇಪಿಸಿದೆ.

ಅಲ್ಲದೆ, ಮೂಲ ಐಟಿ ಕಾಯ್ದೆ ವ್ಯಾಪ್ತಿಗೊಳಪಡದ ಸಂಸ್ಥೆಗಳನ್ನೂ ಸಹ ಶಾಸನಾತ್ಮಕವಾಗಿ ಕಟ್ಟಿ ಹಾಕಲು ಕೇಂದ್ರ ಮುಂದಾಗಿದೆ. ಐಟಿ ಕಾಯ್ದೆಯಲ್ಲಿ ಡಿಜಿಟಲ್ ನ್ಯೂಸ್ ಮೀಡಿಯಾಗಳನ್ನು ಪ್ರತ್ಯೇಕ ವಿಭಾಗದಲ್ಲಿ ಗುರುತಿಸಿಲ್ಲ ಮತ್ತು ಅವುಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಹೊಸ ನಿಯಮಗಳಲ್ಲಿ ಅನಗತ್ಯ ಹಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದೆ.

ಹಾಗೆಯೇ ನಿಯಮಗಳನ್ನು ಸಂವಿಧಾನಬಾಹಿರವೆಂದು ಘೋಷಿಸುವಂತೆ ಸಂಸ್ಥೆ ಕೋರಿದೆ. ಕೇಂದ್ರದ ಈ ಕಾಯ್ದೆಯ ವಿರುದ್ಧ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲೇ ಅಸಮಾಧಾನ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಮುಖ ನ್ಯೂಸ್ ಪೋರ್ಟಲ್‌ಗಳು 3 ಅರ್ಜಿ ಸಲ್ಲಿಸಿವೆ. ಇದೀಗ ಟ್ರುತ್ ಫೌಂಡೇಶನ್ ಕೂಡ ತನ್ನ ಆಕ್ಷೇಪವನ್ನು ಹೈಕೋರ್ಟ್ ಮುಂದೆ ಸಲ್ಲಿಸಿದೆ.

ABOUT THE AUTHOR

...view details