ಕರ್ನಾಟಕ

karnataka

ETV Bharat / state

ಪಿಜಿ-ಸಿಇಟಿ ಕೋಟಾ ಸೀಟು: ಶೇಕಡಾವಾರು ಪ್ರಮಾಣ ಕಡಿತಗೊಳಿಸಿದ್ದ ಸರ್ಕಾರದ ಅಧಿಸೂಚನೆ ರದ್ದು - ನ್ಯಾಯಪೀಠ

ಸೇವಾನಿರತ ವೈದ್ಯರಿಗೆ ಪಿಜಿ-ಸಿಇಟಿ ಕೋಟಾದ ಸೀಟುಗಳನ್ನು ಕಡಿಮೆ ಮಾಡಿ ಅಕ್ಟೋಬರ್​ 6 ರಂದು ಆರೋಗ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು.

ಹೈಕೋರ್ಟ್​
ಹೈಕೋರ್ಟ್​

By

Published : Oct 24, 2022, 8:10 PM IST

ಬೆಂಗಳೂರು: 2022-23ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ(ಪಿಜಿ-ಸಿಇಟಿ) ಸೇವಾನಿರತ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾ ಸೀಟುಗಳ ಸಂಖ್ಯೆಯನ್ನು ಶೇ.30 ರಿಂದ ಶೇ. 15ಕ್ಕೆ ಇಳಿಕೆ ಮಾಡಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿದೆ.

ಸೇವಾನಿರತ ವೈದ್ಯರಿಗೆ ಪಿಜಿ-ಸಿಇಟಿ ಕೋಟಾದ ಸೀಟುಗಳನ್ನು ಕಡಿಮೆ ಮಾಡಿ ಅಕ್ಟೋಬರ್​ 6 ರಂದು ಆರೋಗ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಡಾ.ಕೆ.ಎಸ್​ ಸ್ವಾತಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಲೋಕ್​ ಆರಾಧೆ ಮತ್ತು ನ್ಯಾ.ವಿಶ್ವಜಿತ್​ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ, ಆರೋಗ್ಯ ಇಲಾಖೆ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿ ಆದೇಶಿಸಿದೆ.

ಸೀಟುಗಳ ಸಂಖ್ಯೆಗಿಂತಲೂ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದಾರೆ ಎಂಬ ಕಾರಣ ನೀಡಿ ಸೇವಾನಿರತ ವೈದ್ಯರಿಗೆ ಶೇ. 30 ರಿಂದ ಶೇ. 15 ಇಳಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿರುವ ಅಂಶ ಅಸಮಂಜಸವಲ್ಲ. ಅಲ್ಲದೆ, ಕಳೆದ ವರ್ಷ ನಡೆಸಿದ ಪಿಜಿ-ಸಿಇಟಿಯಲ್ಲಿ 1:5 ರಂತೆ ಅಭ್ಯರ್ಥಿಗಳು ಕೌನ್ಸಿಲಿಂಗ್​ಗೆ ಹಾಜರಾಗಿದ್ದರು. ಹೀಗಿರುವಾಗಿ ಅಭ್ಯರ್ಥಿಗಳಿಗಿಂತ ಸೀಟುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಸರ್ಕಾರದ ನಿರ್ಧಾರಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ್ದರಿಂದ ಸರ್ಕಾರದ ಅಧಿಸೂಚನೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಸೇವಾನಿರತ ಅಭ್ಯರ್ಥಿಗಳಿಗೆ ಸೀಟುಗಳ ಕೋಟಾವನ್ನು ಮರುನಿರ್ಧಾರ ಮಾಡಿ ಸೀಟುಗಳ ಭರ್ತಿ ಮಾಡುವುದಕ್ಕೆ ಸರ್ಕಾರಕ್ಕೆ ಸಂಪೂರ್ಣ ಸ್ವತಂತ್ರವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇದನ್ನೂ ಓದಿ:ವಿಲ್ಸನ್ ಗಾರ್ಡನ್‌ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ, ಸಮಗ್ರ ವರದಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details