ಸಮನ್ಸ್ ರದ್ದು ಕೋರಿ ಹೈಕೋರ್ಟ್ಗೆ ಅಜೀಂ ಪ್ರೇಮ್ಜಿ ಸಲ್ಲಿಸಿದ್ದಅರ್ಜಿ ವಜಾ - Businessman Azim Premji summons canceled
ಸಮನ್ಸ್ ರದ್ದು ಕೋರಿ ಅಜೀಂ ಪ್ರೇಮ್ ಜಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.
![ಸಮನ್ಸ್ ರದ್ದು ಕೋರಿ ಹೈಕೋರ್ಟ್ಗೆ ಅಜೀಂ ಪ್ರೇಮ್ಜಿ ಸಲ್ಲಿಸಿದ್ದಅರ್ಜಿ ವಜಾ Businessman Azim Premji summons canceled](https://etvbharatimages.akamaized.net/etvbharat/prod-images/768-512-7228612-455-7228612-1589647087456.jpg)
ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಅಜೀಂ ಪ್ರೇಮ್ ಜಿ ವಿರುದ್ಧ ಬೆಂಗಳೂರಿನ ವಿಶೇಷ ಕೋರ್ಟ್ ಜಾರಿ ಮಾಡಿರುವ ಸಮನ್ಸ್ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಮನ್ಸ್ ರದ್ದು ಕೋರಿ ಅಜೀಂ ಪ್ರೇಮ್ ಜಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ. ಅಜೀಂ ಪ್ರೇಮ್ ಜಿ ತಮ್ಮ ಒಡೆತನಕ್ಕೆ ಸೇರಿದ 4 ಕಂಪನಿಗಳನ್ನು ನಿಯಮ ಬಾಹಿರವಾಗಿ ಒಂದು ಕಂಪನಿ ವ್ಯಾಪ್ತಿಗೆ ತಂದಿದ್ದಾರೆಂದು ಆರೋಪಿಸಿ ಚೆನ್ನೈನ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಫರೆನ್ಸಿ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಬೆಂಗಳೂರಿನಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು.
ಈ ದೂರಿನಲ್ಲಿ ಸಂಜ್ಞೆಯ ಅಪರಾಧದ ಆರೋಪಗಳಿವೆ ಎಂದು ಪರಿಗಣಿಸಿ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಅಜೀಂ ಪ್ರೇಮ್ ಜಿ ಈ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಜೀಂ ಪ್ರೇಮ್ ಜಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ವಿಶ್ವಾಸ ದ್ರೋಹ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೂರು ಖಾಸಗಿ ದೂರುಗಳನ್ನು ದಾಖಲಿಸಲಾಗಿದೆ.