ಬೆಂಗಳೂರು:ರಸ್ತೆ ಅಪಘಾತದಿಂದಾಗಿ ಕಣ್ಣು ಕಳೆದುಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ವ್ಯಕ್ತಿಯ ನೆರವಿಗೆ ಧಾವಿಸಿರುವ ಹೈಕೋರ್ಟ್, ಪರಿಹಾರದ ಮೊತ್ತವನ್ನು 77 ಸಾವಿರ ರೂ.ಯಿಂದ 5.3 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ. ಬಾಗಲಕೋಟೆ ಜಿಲ್ಲೆ ಬಿಸಲದಿನ್ನಿ ಗ್ರಾಮದ ಪರಸಪ್ಪ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಆದೇಶ ಮಾಡಿದೆ.
ಇದನ್ನೂ ಓದಿ:ಮಕ್ಕಳಾಗದ ಹಿನ್ನೆಲೆ ಗೃಹಿಣಿಗೆ ವಿಷವುಣಿಸಿ ಕೊಂದ ಪತಿಯ ಕುಟುಂಬ..!
ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದರಿಂದ ಅವರು ಶಾಶ್ವತ ಅಂಗವೈಕಲ್ಯಕ್ಕೆ ಕಾರಣರಾಗಿದ್ದಾರೆ. ಹಾಗಾಗಿ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಕಣ್ಣು ಅತ್ಯಂತ ಸೂಕ್ಷ್ಮ ಮತ್ತು ದೇಹದ ಪ್ರಮುಖ ಅಂಗ. ಒಂದು ಕಣ್ಣು ಕಳೆದುಕೊಂಡಿರುವುದರಿಂದ ಅವರ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಬಾಗಲಕೋಟೆಯ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ನಿಗದಿಪಡಿಸಿರುವ 77,500 ರೂ. ಪರಿಹಾರ ಸಾಲದು, ಪರಿಹಾರದ ಮೊತ್ತ 5,03,600 ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ:ಹರೇಕೃಷ್ಣ ಹೆರಿಟೇಜ್ ಟವರ್ಗೆ ಸಿಎಂ ಕೆಸಿಆರ್ ಶಂಕುಸ್ಥಾಪನೆ
ಪ್ರಕರಣದ ವಿವರಗಳನ್ನು ಗಮನಿಸಿದ ನಂತರ ನ್ಯಾಯಪೀಠ, ನ್ಯಾಯಮಂಡಳಿ ಶೇ.8ರಷ್ಟು ಅಂಗ ದೋಷವನ್ನು ಪರಿಗಣಿಸಿ, ಭವಿಷ್ಯದ ಆದಾಯ ಕಡಿಮೆ ಎಂದು ಕೇವಲ 77,500 ರೂ. ಪರಿಹಾರ ನಿಗದಿ ಮಾಡಿದೆ. ಆದರೆ ಬಲಗಣ್ಣು ಕಳೆದುಕೊಂಡಿರುವ ಅರ್ಜಿದಾರನಿಗೆ ಭವಿಷ್ಯದ ಆದಾಯದ ಮೇಲೆ ಶೇ.20 ವಿಕಲಾಂಗತೆಯನ್ನು ಪರಿಗಣಿಸಬೇಕಾಗುತ್ತದೆ. ಹಾಗಾಗಿ ಪರಿಹಾರದ ಮೊತ್ತ ಹೆಚ್ಚಳ ಮಾಡಬೇಕಾಗಿದೆ ಎಂದು ಪೀಠ ಹೇಳಿತು. ಸಂತ್ರಸ್ತನಿಗೆ ರಾಯಲ್ ಸುಂದರಂ ವಿಮಾ ಕಂಪನಿ ನಿಯಮಿತ ಶೇ.6ರ ಬಡ್ಡಿ ಸೇರಿ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ:ದೆಹಲಿ ಮದ್ಯ ಹಗರಣ: ಸಿಸೋಡಿಯಾಗೆ ಮೇ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್..
ಪ್ರಕರಣದ ಹಿನ್ನೆಲೆ:ಪರಸಪ್ಪ 2008ರ ಡಿ.2ರಂದು ಮೋಟಾರ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಸಂತ್ರಸ್ತ ಪರಸಪ್ಪನಿಗೆ 77,500 ರು. ಪರಿಹಾರ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ತುಂಬಾ ಕಡಿಮೆ ಪರಿಹಾರ ನಿಗದಿ ಮಾಡಲಾಗಿದೆ, ಹಾಗಾಗಿ ಪರಿಹಾರ ಧನ ಹೆಚ್ಚಳ ಮಾಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಕೇರಳ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ.. ಸಟ್ಲೆಜ್ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಸಾವು
ಕೆಲಸಕ್ಕೆ ಅರ್ಜಿ ಸಲ್ಲಿಸಿ 14 ವರ್ಷದ ನಂತರ ನೇಮಕಾತಿ ಪತ್ರ ಪಡೆದ ಮಹಿಳೆ