ಕರ್ನಾಟಕ

karnataka

ETV Bharat / state

ದೇವರಾಯನದುರ್ಗದ ಸುತ್ತ ಅಕ್ರಮ ಗಣಿಗಾರಿಕೆ : ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಕೋರ್ಟ್ ಆದೇಶ

ಅರ್ಜಿದಾರರು ಆರೋಪಿಸಿರುವಂತೆ ದೇವರಾಯನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಮಣ್ಣು ಮತ್ತು ಮರಳು ದಂಧೆ ತಡೆಗೆ ಕ್ರಮ ಕೈಗೊಂಡು ಮೂರು ವಾರಗಳಲ್ಲಿ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ದೇವರಾಯನದುರ್ಗ ಸುತ್ತ ಅಕ್ರಮ ಗಣಿಗಾರಿಕೆ
ದೇವರಾಯನದುರ್ಗ ಸುತ್ತ ಅಕ್ರಮ ಗಣಿಗಾರಿಕೆ

By

Published : Jul 31, 2021, 3:55 AM IST

ಬೆಂಗಳೂರು: ತುಮಕೂರಿನ ದೇವರಾಯನದುರ್ಗದ ಅರಣ್ಯ ಪ್ರದೇಶದ ಸುತ್ತಮುತ್ತ ಅವ್ಯಾಹತವಾಗಿ ನಡೆಯುತ್ತಿರುವ ಮಣ್ಣು ಮತ್ತು ಮರಳು ಗಣಿಗಾರಿಕೆ ತಡೆಯಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ಕುರಿತ ವರದಿ ನೀಡುವಂತೆ ಆದೇಶಿಸಿದೆ.

ಕದರನಹಳ್ಳಿ ತಾಂಡ್ಯದ ವಕೀಲ ರಮೇಶ್ ನಾಯಕ್ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್ ಶಂಕರ್ ಮಗದಂ ಅವರಿದ್ದ ವಿಭಾಗೀಯಪೀಠ, ಸರ್ಕಾರ, ಜಿಲ್ಲಾಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, ಅರಣ್ಯಾಧಿಕಾರಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅಲ್ಲದೆ, ಅರ್ಜಿದಾರರು ಆರೋಪಿಸಿರುವಂತೆ ದೇವರಾಯನದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಮಣ್ಣು ಮತ್ತು ಮರಳು ದಂಧೆ ತಡೆಗೆ ಕ್ರಮ ಕೈಗೊಂಡು ಮೂರು ವಾರಗಳಲ್ಲಿ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಇದಕ್ಕೂ ಮುನ್ನ ಅರ್ಜಿದಾರ ವಕೀಲರು ವಾದ ಮಂಡಿಸಿ, ದೇವರಾಯನದುರ್ಗದ ಸುತ್ತಮುತ್ತ ಅಕ್ರಮ ಮರಳು ಮತ್ತು ಮಣ್ಣು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ:ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಧ್ವಜಸ್ತಂಭ, ಪ್ರತಿಮೆ ಸ್ಥಾಪಿಸದಂತೆ ಪಿಐಎಲ್: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

ABOUT THE AUTHOR

...view details