ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ಗಳಿಗೆ ಆನ್ಲೈನ್ ಪರೀಕ್ಷೆಗಳ ಬದಲಿಗೆ ಆಫ್ ಲೈನ್ ಪರೀಕ್ಷೆ ನಡೆಸುವ ಕುರಿತು ನಿಲುವು ತಿಳಿಸುವಂತೆ ವಿವಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಆನ್ಲೈನ್ ಪರೀಕ್ಷೆ : ಕೃಷಿ ವಿವಿ ನಿಲುವು ಕೇಳಿದ ಹೈಕೋರ್ಟ್ - Online exam of Bangalore agriculture university
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ ಗಳಿಗೆ ಆನ್ಲೈನ್ ಪರೀಕ್ಷೆಗಳ ಬದಲಿಗೆ ಆಫ್ ಲೈನ್ ಪರೀಕ್ಷೆ ನಡೆಸುವ ಕುರಿತು ನಿಲುವು ತಿಳಿಸುವಂತೆ ವಿವಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ (ಕೃಷಿ) ಕೋರ್ಸ್ನ ಸದಾನಂದ ಮತ್ತಿತರೆ ವಿದ್ಯಾಥಿರ್ಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಜಿರ್ಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅಜಿರ್ದಾರರ ಪರ ವಕೀಲರು ವಾದಿಸಿ, ಕೃಷಿ ವಿವಿಯ ವಿವಿಧ ಕೋರ್ಸ್ಗಳಿಗೆ ಆ.21ರಿಂದ ಆನ್ಲೈನ್ ಪರೀಕ್ಷೆ ನಡೆಯಬೇಕಿತ್ತು. ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಈ ಮಧ್ಯೆ ವಿವಿ ಪರೀಕ್ಷಾ ದಿನಾಂಕವನ್ನು ಸೆ.4ಕ್ಕೆ ಮುಂದೂಡಿದೆ. ಆದರೆ, ಅಕ್ಟೋಬರ್ನಿಂದ ಎಂದಿನಂತೆ ತರಗತಿಗಳು ಆರಂಭಗೊಳ್ಳಲಿವೆ ಎಂದು ಸರ್ಕಾರವೇ ಹೇಳುತ್ತಿದ್ದು, ಆನ್ಲೈನ್ ಪರೀಕ್ಷೆಗಳ ಬದಲಿಗೆ ಆಫ್ ಲೈನ್ ಪರೀಕ್ಷೆಗಳನ್ನೇ ನಡೆಸಬಹುದು. ಈ ನಿಟ್ಟಿನಲ್ಲಿ ವಿವಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಆನ್ಲೈನ್ ಪರೀಕ್ಷೆಗಳ ಬದಲಿಗೆ ಮೊದಲಿನ ವ್ಯವಸ್ಥೆಯಂತೆ ಆಫ್ ಲೈನ್ ಪರೀಕ್ಷೆಗಳನ್ನು ನಡೆಸಬೇಕೆಂಬ ಅಜಿರ್ದಾರರ ಮನವಿ ಕುರಿತು ನಿಲುವು ತಿಳಿಸಿ ಆಕ್ಷೇಪಣೆ ಸಲ್ಲಿಸುವಂತೆ ವಿವಿಗೆ ಸೂಚಿಸಿದ ಪೀಠ, ಅಜಿರ್ಯನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವ ಅಗತ್ಯ ಇರುವುದರಿಂದ ಶಿಕ್ಷಣದ ವಿಚಾರಗಳಿಗೆ ಸಂಬಂಧಿಸಿದ ಅಜಿರ್ಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತು.