ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಐಸಿಸ್ ಹಾಗೂ ಜೆಎಂಬಿ ಉಗ್ರರು ತೆರೆಮರೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದರ ಬಗ್ಗೆ ಎನ್ಐಎ ಮುಖ್ಯಸ್ಥ ಹೇಳಿಕೆ ಬೆನ್ನಲೇ ನಗರದಲ್ಲಿ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ.
ಉಗ್ರರ ಕರಿ ನೆರಳು ರಾಜಧಾನಿಯಲ್ಲಿ ಹೈಅಲರ್ಟ್ - threat of terror
ಕರ್ನಾಟಕ ಹಾಗೂ ಕೇರಳದಲ್ಲಿ ಜೆಎಂಬಿ ಉಗ್ರರು ಸಕ್ರಿಯರಾಗಿದ್ದು, ಆರ್ಎಸ್ಎಸ್ ನಾಯಕರೇ ಟಾರ್ಗೆಟ್ ಆಗಿದ್ದಾರೆ. ಆದ್ದರಿಂದ ಹೈ ಅಲರ್ಟ್ ಆಗಿರುವಂತೆ ಎನ್ಐಎ ಮುಖ್ಯಸ್ಥ ಅಲೋಕ್ ಮಿತ್ತಲ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದರು. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭದ್ರತೆ ಬಗ್ಗೆ ಕೇಂದ್ರೀಕರಿಸಲು ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.

ಇನ್ನು ಬೆಂಗಳೂರಿನ ಪ್ರಮುಖ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಭದ್ರತೆ ಬಗ್ಗೆ ನಿಗಾವಹಿಸಲು ಸೂಚನೆ ನೀಡಲಾಗಿದೆ. ನಗರದ ಹೊರವಲಯಗಳಲ್ಲಿ ಅನುಮಾನಾಸ್ಪದವಾಗಿ ಬರುವ ವಾಹನಗಳು ಹಾಗೂ ವ್ಯಕ್ತಿಗಳ ಬಗ್ಗೆ ಹದ್ದಿನ ಕಣ್ಣಿಡಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೌಖಿಕವಾಗಿ ಸೂಚನೆ ನೀಡಿದ್ದಾರೆ.