ಬೆಂಗಳೂರು:ಮಂಗಳೂರಿನಲ್ಲಿ ಸಂಭವಿಸಿದ ಪ್ರೆಶರ್ ಕುಕ್ಕರ್ ಸ್ಪೋಟ ಪ್ರಕರಣದ ತನಿಖೆ ನಡೆಯುತ್ತಿದ್ದು ಕರಾವಳಿ, ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ. ಮತ್ತೊಂದೆಡೆ, ರೈಲ್ವೇ ಪೊಲೀಸರು ಮುಂಜಾಗ್ರತೆ ಕ್ರಮವಾಗಿ ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಭದ್ರತೆ ಪರಿಶೀಲಿಸಿದ ಎಸ್ಪಿ ಸೌಮ್ಯಲತಾ - ಡಿವೈಎಸ್ಪಿ ಗೀತಾ
ರೈಲ್ವೇ ಎಸ್ಪಿ ಸೌಮ್ಯಲತಾ ನೇತೃತ್ವದ ಪೊಲೀಸ್ ತಂಡ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಿ ಎಲ್ಲಾ ಪ್ಲಾಟ್ ಫಾರಂ ಪರಿಶೀಲಿಸಿದರು. ಪ್ರತಿಯೊಂದು ರೈಲು ಬೋಗಿಗೂ ತೆರಳಿ ತಪಾಸಣೆ ನಡೆಸಿದರು.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಭದ್ರತೆ ಪರಿಶೀಲಿಸಿದ ಎಸ್ಪಿ ಸೌಮ್ಯಲತಾ
ರೈಲ್ವೇ ಎಸ್ಪಿ ಸೌಮ್ಯಲತಾ ನೇತೃತ್ವದ ಪೊಲೀಸ್ ತಂಡ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಿ ಎಲ್ಲಾ ಪ್ಲಾಟ್ ಫಾರಂ ಪರಿಶೀಲಿಸಿದರು. ರೈಲಿನ ಪ್ರತಿ ಬೋಗಿಗೆ ತೆರಳಿ ತಪಾಸಣೆ ನಡೆಸಿದರು. ರೈಲು ಮೂಲಕ ಬರುವ ಪಾರ್ಸೆಲ್ಗಳ ಬಗ್ಗೆ ನಿಗಾ ವಹಿಸುವಂತೆ ಎಚ್ಚರಿಸಿದರು. ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದರೆ ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳುವಂತೆ ಡಿವೈಎಸ್ಪಿ ಗೀತಾರವರಿಗೆ ಎಸ್ಪಿ ಸೌಮ್ಯಲತಾ ತಾಕೀತು ಮಾಡಿದರು.
ಇದನ್ನೂ ಓದಿ:ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್ಐಎ ಶೋಧ
Last Updated : Nov 22, 2022, 3:21 PM IST