ಕರ್ನಾಟಕ

karnataka

ETV Bharat / state

ಹೈಟೆಕ್ ಹನಿಟ್ರ್ಯಾಪ್ ಪ್ರಕರಣ: ಬಾಂಬೆ ಮಾಡೆಲ್ ಬಂಧನ - ಬಾಂಬೆ ಮಾಡೆಲ್ ಬಂಧನ

ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿತೆ, ಬಾಂಬೆ ಮಾಡೆಲ್ ಒಬ್ಬರನ್ನು ಸೆರೆ ಹಿಡಿದಿದ್ದಾರೆ. ಇದಕ್ಕೂ ಮುನ್ನ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು.

Hi Tech Honeytrap Case
ಹೈಟೆಕ್ ಹನಿಟ್ರ್ಯಾಪ್ ಪ್ರಕರಣ: ಬಾಂಬೆ ಮಾಡೆಲ್ ಬಂಧನ

By

Published : Aug 16, 2023, 11:43 AM IST

ಬೆಂಗಳೂರು:ಟೆಲಿಗ್ರಾಂ ಮೂಲಕ ಯುವಕರನ್ನ‌ ಪರಿಚಯಿಸಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಪುಟ್ಟೇನಹಳ್ಳಿ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿತೆಯನ್ನು ಸೆರೆಹಿಡಿದಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಯುವಕನನ್ನ ಜೆ.ಪಿ. ನಗರದ ವಿನಾಯಕ್ ನಗರಕ್ಕೆ ಕರೆಯಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬೆದರಿಸಿ 50 ಸಾವಿರ ರೂ. ಸುಲಿಗೆ ಮಾಡಿರುವುದಾಗಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳಾದ ಶರಣಪ್ರಕಾಶ್ ಬಳಿಗೇರ, ಅಬ್ದುಲ್‌ ಖಾದರ್, ಯಾಸಿನ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಾಡೆಲ್ ಆಗಿರುವ ಬಾಂಬೆ ಮೂಲದ‌‌ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಬಲೆ ಬೀಸುತ್ತಿದ್ದ ಆರೋಪಿತೆ:ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮುಖಾಂತರ ಮಹಿಳಾ ಆರೋಪಿತೆ ಯುವಕರನ್ನು ಪರಿಚಯಿಸಿಕೊಂಡು ಅವರ ಬಲಹೀನತೆ ಅರಿತು ಮಂಚದ ಆಸೆ ತೋರಿಸುವುದಾಗಿ ಜೆ.ಪಿ. ನಗರದ ಐದನೇ ಹಂತದಲ್ಲಿರುವ ವಿನಾಯಕ್ ನಗರದ ಮನೆಯೊಂದಕ್ಕೆ‌ ಕರೆಯಿಸಿಕೊಳ್ಳುತ್ತಿದ್ದಳು. ಈಕೆ ಹಿಂದೆ ಆರೋಪಿಗಳ ಗ್ಯಾಂಗ್ ಕೆಲಸ ಮಾಡುತಿತ್ತು. ಕಳೆದ ಎರಡು ತಿಂಗಳ ಹಿಂದೆ ದೂರುದಾರರನ್ನು ಈ ಗ್ಯಾಂಗ್​ ಮನೆಗೆ ಕರೆಯಿಸಿಕೊಂಡಿತ್ತು. ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು. ಕೆಲ ಕ್ಷಣಗಳ ಬಳಿಕ ಪೂರ್ವ ಸಂಚಿನಂತೆ ಮನೆಗೆ ನುಗ್ಗಿ ಆತನ ಮೊಬೈಲ್ ಕಸಿದು ನಾಲ್ವರ ಗ್ಯಾಂಗ್ ಪ್ರಶ್ನಿಸುತಿತ್ತು. ಅನ್ಯ ಧರ್ಮದ ಯುವತಿಯಾಗಿದ್ದು ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪುಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್​ನಲ್ಲಿ ಪೋಟೋ, ವಿಡಿಯೋ ಸೆರೆಹಿಡಿಯುತಿತ್ತು‌ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸುಮಾರು 30 ಲಕ್ಷ ಹಣದವರೆಗೆ‌ ನೊಂದವರಿಂದ ಹಣ ವರ್ಗಾವಣೆ:ದೂರುದಾರರನ ಕಸಿದಿದ್ದ ಮೊಬೈಲ್​ನ ಕಾಂಟಾಕ್ಟ್ ಲಿಸ್ಟ್ ಪಟ್ಟಿ ಮಾಡಿಕೊಂಡು ಕೇಳಿದಷ್ಟು ಹಣ ಕೊಡದಿದ್ದರೆ, ಕುಟುಂಬಸ್ಥರಿಗೆ ಕಳುಹಿಸಿ ಮಾನ ಮಾರ್ಯಾದೆ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು. ಆಕೆಯೊಂದಿಗೆ ಸಂಪ್ರದಾಯದಂತೆ ಮದುವೆಯಾಗಬೇಕು ಎಂದು ಧಮಕಿ ಹಾಕುತ್ತಿದ್ದರು. ಮಾರ್ಯಾದೆಗೆ ಅಂಜಿ ನೊಂದ ಯುವಕ ಆರೋಪಿತರ ಬ್ಯಾಂಕ್ ಅಕೌಂಟ್​ಗೆ‌ ದುಡ್ಡು ಹಾಕಿದ್ದ.‌ ಹಣ‌ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ‌ನಿರಂತರ ಕಾರ್ಯಾಚರಣೆ ಬಳಿಕ ಮೂವರನ್ನು ಬಂಧಿಸಲಾಗಿತ್ತು. ಸುಮಾರು 30 ಲಕ್ಷ ಹಣದವರೆಗೆ‌ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗೆ ಹತ್ತಾರು ಜನರನ್ನು ಈ ಗ್ಯಾಂಗ್ ಹನಿಟ್ರ್ಯಾಪ್ ಜಾಲಕ್ಕೆ‌ ಸಿಲುಕಿಸಿತ್ತು ಎಂದು ದಕ್ಷಿಣ ವಿಭಾಗದ‌‌ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದರು.

ಇದನ್ನೂ ಓದಿ:Gun exploded: ಬಂದೂಕಿಗೆ ತುಂಬುವಾಗ ಸಿಡಿದು ಎದೆ ಸೀಳಿದ ಗುಂಡು.. ಆಟವಾಡುತ್ತಿದ್ದಾಗ 4ರ ಬಾಲೆ ದಾರುಣ ಸಾವು

ABOUT THE AUTHOR

...view details