ಬೆಂಗಳೂರು: ಮಣಿಪುರದಿಂದ ಹೆರಾಯಿನ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೆ.ಜಿ. ಹಳ್ಳಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಮಣಿಪುರದ ಖಲಿದಾ (32) ಮತ್ತು ಸುಹೇಲ್ (34) ಬಂಧಿತರಾಗಿದ್ದು, ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ 80 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರದಿಂದ ಹೆರಾಯಿನ್ ಪೂರೈಕೆ: ಕೆ.ಜಿ.ಹಳ್ಳಿ ಪೊಲೀಸರಿಂದ ಇಬ್ಬರ ಬಂಧನ - ಕೆ.ಜಿ.ಹಳ್ಳಿ ಪೊಲೀಸರಿಂದ ಇಬ್ಬರ ಬಂಧನ
ಅಂತಾರಾಜ್ಯದಿಂದ ಮಾದಕವಸ್ತು ತಂದು ಮಾರುತ್ತಿದ್ದ ಇಬ್ಬರನ್ನು ಕೆ.ಜಿ.ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ಪೊಲೀಸರಿಂದ ಇಬ್ಬರ ಬಂಧನ
ಆರೋಪಿಗಳು ಬರ್ಮಾ ದೇಶದಲ್ಲಿ ಹೆರಾಯಿನ್ ಖರೀದಿಸುತ್ತಿದ್ದರು. ರೈಲಿನಲ್ಲಿ ಮಧ್ಯವರ್ತಿಗಳಿಂದ ಬೆಂಗಳೂರಿಗೆ ತರಿಸಿಕೊಂಡು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪೊಲೀಸ್ ಮಾಹಿತಿದಾರನೇ ಡ್ರಗ್ಸ್ ಡೀಲರ್.. ಮಫ್ತಿಯಲ್ಲಿ ಬಂದ ಖಾಕಿಗೆ ಕಾದಿತ್ತು ಶಾಕ್..!