ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ, ಬೇಲ್ ಸಿಕ್ಕ ಬಳಿಕ ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಎದ್ದಿದೆ. ಜಾಮೀನು ದೊರೆತ ನಂತ್ರ ವಿಶ್ರಾಂತಿಗಾಗಿ ಸಂಜನಾ ರೆಸಾರ್ಟ್ಗೆ ತೆರಳಿದ್ದಾರೆ ಅಂತಾ ಬಲ್ಲ ಮೂಲಗಳಿಂದ ತಿಳಿದು ಬಂದಿವೆ.
ಮೊನ್ನೆ ರಾತ್ರಿ 9 ಗಂಟೆಗೆ ಪರಪ್ಪನ ಅಗ್ರಹಾರದಿಂದ ಹೊರ ಬಂದು ಈವರೆಗೂ ಯಾರ ಸಂಪರ್ಕಕ್ಕೂ ಸಿಗದ ಸಂಜನಾ, ಮೊಬೈಲ್ ಕರೆ ಸ್ವೀಕರಿಸದೇ ಅಜ್ಞಾತ ಸ್ಥಳ ಸೇರಿದ್ದಾರೆ. ಇಂದಿರಾನಗರದ ತಮ್ಮ ಮನೆಗೂ ಬರದೆ, ಪೋಷಕರ ಜೊತೆ ರೆಸಾರ್ಟ್ ಸೇರಿದ್ದಾರೆ.
ಯಲಹಂಕದ ಹೊರ ವಲದಲ್ಲಿರುವ ಅಂಗ್ಸಾನ್ ರೆಸಾರ್ಟ್ನಲ್ಲಿ ಸಂಜನಾ ಇರೋ ಬಗ್ಗೆ ಮಾಹಿತಿ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ವಿಶ್ರಾಂತಿಗಾಗಿ ರೆಸಾರ್ಟ್ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಸಂಜನಾ ಗಲ್ರಾನಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿರುವ ಕಾರಣ, ಬೆಂಗಳೂರು ಸಿಟಿ ಬಿಟ್ಟು ಎಲ್ಲಿಯೂ ತೆರಳುವ ಹಾಗಿಲ್ಲ. ಹೀಗಾಗಿ ನಿಗೂಢ ಜಾಗದಲ್ಲಿ ಸಂಜನಾ ಜಾಂಡ ಹೂಡಿದ್ದಾರೆ. ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಸಂಬಂಧ ಮೂರು ತಿಂಗಳ ಬಳಿಕ ನಟಿ ಸಂಜನಾ ಗಲ್ರಾನಿ ಅವರು ಷರತ್ತು ಬದ್ಧ ಜಾಮೀನಿನ ಮೇಲೆ ಇದೇ ಗುರುವಾರ ರಾತ್ರಿ ಹೊರ ಬಂದಿದ್ದಾರೆ.