ಕರ್ನಾಟಕ

karnataka

ETV Bharat / state

ಹೀರೋ ಎಲೆಕ್ಟ್ರಿಕ್​ ಬೈಕ್​ಗಳ ಬುಕಿಂಗ್​ಗೆ ಆನ್​ಲೈನ್​ನಲ್ಲಿ ಅವಕಾಶ

ಹೀರೋ ಸಂಸ್ಥೆ ತನ್ನ ಗ್ರಾಹಕರಿಗೆ ಎಲೆಕ್ಟ್ರಾನಿಕ್​ ಬೈಕ್​​​ ಸೇವೆ ಒದಗಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಬೈಕ್​ಗಳಿಗೆ ಆನ್​ಲೈನ್​ನಲ್ಲಿ ಬುಕಿಂಗ್​ ಆರಂಭಿಸಿದೆ. ಹೀರೋ ಎಲೆಕ್ಟ್ರಿಕ್ ಸ್ಕೂಟರ್​​​​ಗನ್ನು ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ 5,000 ರೂಪಾಯಿ ಮೌಲ್ಯದ ಇನ್‍ಸ್ಟಂಟ್ ನಗದು ರಿಯಾಯ್ತಿ ಲಭ್ಯವಿದೆ. ಇನ್ನು ಗ್ಲೈಡ್ ಮತ್ತು ಇ-ಸೈಕಲ್ ಅನ್ನು ಬುಕ್ ಮಾಡುವ ಗ್ರಾಹಕರಿಗೆ 3,000 ರೂಪಾಯಿಗಳ ರಿಯಾಯ್ತಿ ಸಿಗಲಿದೆ. ಇದಲ್ಲದೇ, ಖರೀದಿಗೆ ಶಿಫಾರಸು ಮಾಡುವ ಗ್ರಾಹಕರಿಗೆ ಹೆಚ್ಚುವರಿಯಾಗಿ 1,000 ರೂಪಾಯಿಗಳ ರಿಯಾಯ್ತಿಯೂ ಲಭ್ಯವಿದೆ.

Hero Electric Bikes opens Online booking for customers
ಹೀರೋ ಎಲೆಕ್ಟ್ರಿಕ್​ ಬೈಕ್​ಗಳ ಬುಕ್ಕಿಂಗ್​​ಗೆ ಆನ್​ಲೈನ್​ನಲ್ಲಿ ಅವಕಾಶ

By

Published : Apr 18, 2020, 4:35 PM IST

ಬೆಂಗಳೂರು:ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನದ ಬ್ರಾಂಡ್ ಆಗಿರುವ ಹೀರೋ ಎಲೆಕ್ಟ್ರಿಕ್ ತನ್ನ ಎಲ್ಲಾ ಶ್ರೇಣಿಯ ವಾಹನಗಳ ಆನ್‍ಲೈನ್ ಮಾರಾಟ ಯೋಜನೆಯನ್ನು ಘೋಷಿಸಿದೆ (ಫ್ಲ್ಯಾಶ್ ಲೆಡ್-ಆ್ಯಸಿಡ್ ಕಡಿಮೆ ವೇಗದ ಮಾದರಿ ಹೊರತುಪಡಿಸಿ). ಈ ಯೋಜನೆಯು ಏಪ್ರಿಲ್ 17 ರಿಂದ ಮೇ 15, 2020 ವರೆಗೆ ಬುಕಿಂಗ್‍ಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲಾ ಬಗೆಯ ಮಾಡೆಲ್‍ಗಳಿಗೆ ಬುಕಿಂಗ್ ಮಾಡುವ ಶುಲ್ಕವನ್ನು 2,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಈ ಬುಕಿಂಗ್ ಮೊತ್ತವನ್ನು ಮರುಪಾವತಿ ಮಾಡುವುದಿಲ್ಲ. ಆದರೆ, ಜೂನ್ ನಂತರದವರೆಗೆ ಲಾಕ್‍ಡೌನ್ ಅನ್ವಯವಾದರೆ ವಾಪಸ್ ನೀಡಲಾಗುತ್ತದೆ. ಮುಂಗಡವಾಗಿ ಬುಕಿಂಗ್ ಮಾಡುವ ಗ್ರಾಹಕರು ಲಾಕ್‍ಡೌನ್ ಅವಧಿ ಮುಗಿದ ನಂತರ ಜೂನ್ ಅಂತ್ಯದವರೆಗೆ ಯಾವಾಗ ಬೇಕಾದರೂ ವಾಹನಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಹೀರೋ ಎಲೆಕ್ಟ್ರಿಕ್ ಸ್ಕೂಟರ್​​​​ಗಳನ್ನು ಬುಕ್ ಮಾಡುವ ಎಲ್ಲ ಗ್ರಾಹಕರಿಗೆ 5,000 ರೂಪಾಯಿ ಮೌಲ್ಯದ ಇನ್‍ಸ್ಟಂಟ್ ನಗದು ರಿಯಾಯ್ತಿ ಲಭ್ಯವಿದೆ. ಇನ್ನು ಗ್ಲೈಡ್ ಮತ್ತು ಇ-ಸೈಕಲ್ ಅನ್ನು ಬುಕ್ ಮಾಡುವ ಗ್ರಾಹಕರಿಗೆ 3,000 ರೂಪಾಯಿಗಳ ರಿಯಾಯ್ತಿ ಸಿಗಲಿದೆ. ಇದಲ್ಲದೇ, ಖರೀದಿಗೆ ಶಿಫಾರಸು ಮಾಡುವಂತಹ ಗ್ರಾಹಕರಿಗೆ ಹೆಚ್ಚುವರಿಯಾಗಿ 1,000 ರೂಪಾಯಿಗಳ ರಿಯಾಯ್ತಿಯೂ ಲಭ್ಯವಿದೆ.

ಈ ಯೋಜನೆಯ ಎಲ್ಲಾ ಆಫರ್​​ಗಳು ಕೇವಲ ಆನ್‍ಲೈನ್‍ನಲ್ಲಿ ಬುಕಿಂಗ್ ಮಾಡುವ ಗ್ರಾಹಕರಿಗೆ ಲಭ್ಯವಿವೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್, ನಿಕ್ಸ್, ಆಪ್ಟಿಮಾ, ಫೋಟೊನ್, ಡ್ಯಾಶ್ ಮತ್ತು ಇಆರ್ (ವಿಸ್ತರಿತ ಶ್ರೇಣಿ) ಎಲೆಕ್ಟ್ರಿಕ್ ಸ್ಕೂಟರ್​​​ಗಳನ್ನು ಹೊಂದಿದೆ.

ಇದರ ಜತೆಗೆ ಗ್ಲೈಡ್ ಮತ್ತು ಇ-ಸೈಕಲ್ ಅನ್ನೂ ಹೊಂದಿದ್ದು, ಈ ವಾಹನಗಳು ಅತ್ಯುತ್ತಮ ಗುಣಮಟ್ಟದ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ಒಳಗೊಂಡಿವೆ.

ಪ್ರಸ್ತುತ ಸನ್ನಿವೇಶದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಪರಿಸರದ ಗುಣಮಟ್ಟ ನಿಧಾನವಾಗಿ ಸುಧಾರಣೆಯಾಗುತ್ತಿದೆ. ಕಡಿಮೆ ಧೂಳು ಮತ್ತು ವಾಯುಮಾಲಿನ್ಯ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪರಿಸರದ ಗುಣಮಟ್ಟ ಸುಧಾರಣೆಯಾಗುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಶೂನ್ಯ ಮಾಲಿನ್ಯ ಸಾರಿಗೆ ವ್ಯವಸ್ಥೆ ಮೂಲಕ ಹಸಿರು ದೇಶವನ್ನಾಗಿ ಮಾಡುವುದು ಹೀರೋ ಎಲೆಕ್ಟ್ರಿಕ್‍ನ ಉದ್ದೇಶವಾಗಿದೆ. ಈ ಸನ್ನಿವೇಶವನ್ನು ಸದುಪಯೋಗಪಡಿಸಿಕೊಂಡು ಸಾರ್ವಜನಿಕರು ಹೆಚ್ಚು ಹೆಚ್ಚು ಪರಿಸರ ರಕ್ಷಣೆಯನ್ನು ಮಾಡುವಂತಹ ಸಾರಿಗೆ ವ್ಯವಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಹೀರೋ ಎಲೆಕ್ಟ್ರಿಕ್ ಮನವಿ ಮಾಡಿದೆ. ಈ ಮೂಲಕ ದೇಶದಲ್ಲಿ ಸುಸ್ಥಿರ ಮತ್ತು ಆರೋಗ್ಯಕರವಾದ ಪರಿಸರ ರೂಪಿಸಲು ನೆರವಾಗಬೇಕೆಂದು ಕಂಪನಿ ಒತ್ತಾಯಿಸಿದೆ.

ಈ ಆಫರ್ ಬಗ್ಗೆ ಮಾತನಾಡಿದ ಹೀರೋ ಎಲೆಕ್ಟ್ರಿಕ್‍ನ ಸಿಇಒ ಸೋಹಿಂದರ್ ಗಿಲ್ ಅವರು, ಒಂದು ಸಣ್ಣ ವೈರಸ್ ಹೇಗೆ ನಾಗರಿಕರ ಆರೋಗ್ಯ ಮತ್ತು ಜೀವನದ ಮೇಲೆ ಆತಂಕದ ಪರಿಣಾಮವನ್ನು ಬೀಡುತ್ತದೆ ಎಂಬುದಕ್ಕೆ ಕೋವಿಡ್ ಸಾಕ್ಷಿಯಾಗಿ ನಿಂತಿದೆ. ಈಗಾಗಲೇ ವಾಯು ಮಾಲಿನ್ಯದಿಂದ ತತ್ತರಿಸಿರುವ ನಾಗರಿಕರ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುವ ಮೂಲಕ ಕೊವಿಡ್ ಒಂದು ರೀತಿಯಲ್ಲಿ ಅನಿರೀಕ್ಷಿತ ಬಿಕ್ಕಟ್ಟನ್ನು ತಂದೊಡ್ಡಿದೆ. ಕೆಲವು ದಿನಗಳಿಂದ ಮಾಲಿನ್ಯ ಉಂಟುಮಾಡುವ ವಾಹನಗಳ ಓಡಾಟವಿಲ್ಲದಿರುವುದರಿಂದ ಆಕಾಶ ಸ್ವಚ್ಛವಾಗಿದ್ದರೆ, ಅಪರೂಪದ ಪಕ್ಷಿಗಳ ಕಲರವ ಎಲ್ಲೆಡೆ ಕೇಳಿಬರುವಂತಾಗಿದೆ.

ಇಂಥ ಪರಿಸ್ಥಿತಿಯಲ್ಲಿ ಗ್ರಾಹಕರು ಶುದ್ಧ ಸಾರಿಗೆ ವ್ಯವಸ್ಥೆಗೆ ಬದಲಾವಣೆಗೊಳ್ಳುತ್ತಾರೆ ಎಂಬ ಅಚಲ ವಿಶ್ವಾಸ ನನಗಿದೆ. ಆನ್‍ಲೈನ್ ಮೂಲಕ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳೆಡೆಗೆ ಆಸಕ್ತಿ ತೋರುತ್ತಾರೆ ಎಂಬ ವಿಶ್ವಾಸವೂ ನನಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್‍ನ ಪ್ರಮುಖ ಮಿಷನ್ ಎಂದರೆ ಮಾಲಿನ್ಯರಹಿತವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿದೆ. ನಮ್ಮ ಈ ಯೋಜನೆಯು ಭೂಮಿತಾಯಿಯನ್ನು ಸ್ವಚ್ಛ ಮತ್ತು ಹಸಿರುಗೊಳಿಸುವುದಾಗಿದೆ ಎಂದರು.

ABOUT THE AUTHOR

...view details