ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಆನೆ ಹಿಂಡು ಪ್ರತ್ಯಕ್ಷ: ಡ್ರೋನ್ ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆ - ಬನ್ನೇರುಘಟ್ಟ ಅರಣ್ಯದಿಂದ ವಲಸೆ

ಪ್ರತಿವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಕರ್ನಾಟಕದಿಂದ ವಲಸೆ ಬರುವ ಆನೆ ಹಿಂಡು ಸಹಜವಾಗಿ ತಮಿಳುನಾಡಿನ ಹೊಸೂರು, ಸೂಳಗಿರಿ, ಬೇರಕಿ, ಕರ್ನಾಟಕದ ಮಾಸ್ತಿ, ಟೇಕಲ್, ಮಾಲೂರು, ಕೆಜಿಎಫ್ ಮೂಲಕ ಹೊಸಕೋಟೆಯತ್ತ ಜಾಡು ಹಿಡಿಯುತ್ತವೆ.

Herd of wildebeest captured on drone camera
ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾಗಿರುವ ಕಾಡಾನೆಗಳ ಹಿಂಡು

By

Published : Nov 3, 2022, 1:18 PM IST

ಬೆಂಗಳೂರು:ಕರ್ನಾಟಕ ತಮಿಳುನಾಡು ಗಡಿಯ ಹೊಸೂರು ಜವಳಗಿರಿಯಲ್ಲಿ ಕಾಡಿನಲ್ಲಿ ಎಪ್ಪತ್ತಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿರುವ ದೃಶ್ಯಾವಳಿಗಳನ್ನು ಅರಣ್ಯಾಧಿಕಾರಿಗಳು ಡ್ರೋನ್​ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಅಧಿಕಾರಿಗಳು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಂಚಲನ ಮೂಡಿಸಿದೆ. ಈ ಆನೆಗಳು ಬನ್ನೇರುಘಟ್ಟ ಅರಣ್ಯದಿಂದ ವಲಸೆ ಬಂದ ಕಾಡಾನೆಗಳು ಎಂದು ಗುರುತಿಸಲಾಗಿದೆ.

ಪ್ರತಿವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಕರ್ನಾಟಕದಿಂದ ವಲಸೆ ಬರುವ ಆನೆ ಹಿಂಡು ಸಹಜವಾಗಿ ತಮಿಳುನಾಡಿನ ಹೊಸೂರು, ಸೂಳಗಿರಿ, ಬೇರಕಿ, ಕರ್ನಾಟಕದ ಮಾಸ್ತಿ, ಟೇಕಲ್, ಮಾಲೂರು, ಕೆಜಿಎಫ್ ಮೂಲಕ ಹೊಸಕೋಟೆಯತ್ತ ಜಾಡು ಹಿಡಿಯುತ್ತವೆ. ಹಾಗೆಯೇ ಎಲ್ಲಿಯಾದರೂ ಆನೆಗಳಿಗೆ ಮೇವು ನೀರು, ದಟ್ಟ ಮರಗಳು ಸಿಕ್ಕರೆ ಅಲ್ಲೇ ದಿನಗಟ್ಟಲೆ ಆಶ್ರಯ ಪಡೆಯುವ ಜಾಯಮಾನ ಈ ಗುಂಪಿಗಿದೆ. ಹೀಗಾಗಿ ತಮಿಳುನಾಡು ಗಡಿ ದಾಟಿರುವ 10ಕ್ಕೂ ಹೆಚ್ಚು ಕಾಡಾನೆಗಳು ಜವಳಗಿರಿ ಡೆಂಕಣಿಕೋಟೆ ಮೂಲಕ ಹೊಸೂರು ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿವೆ.

ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾಗಿರುವ ಕಾಡಾನೆಗಳ ಹಿಂಡು

ರೈತರ ರಾಗಿ ಬೆಳೆ ನಾಶ ಮಾಡುವ ಸಾಧ್ಯತೆ ಹಿನ್ನೆಲೆ ಅರಣ್ಯ ಅಧಿಕಾರಿಗಳು ಮತ್ತು ಫಾರೆಸ್ಟ್ ಗಾರ್ಡ್​ಗಳು ನಿಗಾ ವಹಿಸಿದ್ದು, ಆನೆಗಳನ್ನು ಕರ್ನಾಟಕ ಗಡಿಯತ್ತ ಓಡಿಸಲು ತಮಿಳುನಾಡು ವಾಚರ್​ಗಳು ಹರಸಾಹಸ ಪಡುತ್ತಿದ್ದಾರೆ. ಅರಣ್ಯದ ಗಡಿಯಲ್ಲಿರುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆಯನ್ನು ನೀಡಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ: ಡ್ರೋನ್​ ಕ್ಯಾಮರಾದಲ್ಲಿ 7 ಆನೆಗಳು ಸೆರೆ

ABOUT THE AUTHOR

...view details