ಬೆಂಗಳೂರು :ನಿರ್ಭಯಾ ಸೇಫ್ ಸಿಟಿ ಟೆಂಡರ್ ಅವ್ಯವಹಾರ ಸಂಬಂಧ ಐಪಿಎಸ್ ಅಧಿಕಾರಿಗಳ ಶೀತಲ ಸಮರದ ಬೆನ್ನಲೇ ಕೆಲ ದಿನಗಳ ಹಿಂದೆ ವರ್ಗಾವಣೆಯಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನ ಮತ್ತೆ ಎತ್ತಂಗಡಿ ಮಾಡಲಾಗಿದೆ.
11 ದಿನದೊಳಗೆ ಮತ್ತೆ ನಿಂಬಾಳ್ಕರ್ ಎತ್ತಂಗಡಿ.. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗ - Hemant Nimbalkar transfer
ಈ ಹಿಂದೆ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಆಂತರಿಕಾ ಭದ್ರತಾ ಇಲಾಖೆಯ( ಐಎಸ್ ಡಿ) ಐಜಿಪಿಯನ್ನಾಗಿ ವರ್ಗಾವಣೆಯಾಗಿ ಡಿ.31ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು..

ಹೇಮಂತ್ ನಿಂಬಾಳ್ಕರ್ ವರ್ಗಾವಣೆ
ಈ ಹಿಂದೆ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಆಂತರಿಕಾ ಭದ್ರತಾ ಇಲಾಖೆಯ( ಐಎಸ್ ಡಿ) ಐಜಿಪಿಯನ್ನಾಗಿ ವರ್ಗಾವಣೆಯಾಗಿ ಡಿ.31ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
11 ದಿನಗಳ ಅಂತರದಲ್ಲೇ ಐಎಸ್ಡಿಯಿಂದ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಆದೇಶ ರದ್ದುಪಡಿಸಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಿ ಪರಿಷ್ಕೃತ ಆದೇಶ ಹೊರಡಿಸಿದೆ.