ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಟೆಂಡರ್ ಹಗರಣ ಸಂಬಂಧ ಆರೋಪ ಹಾಗೂ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಡಿ.ರೂಪಾ ಸೇರಿ 9 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಹೇಮಂತ್ ನಿಂಬಾಳ್ಕರ್, ರೂಪಾ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ! - Nirbhaya Safe City Tender Scam
19:01 December 31
ಹೇಮಂತ್ ನಿಂಬಾಳ್ಕರ್, ರೂಪಾ ವರ್ಗಾವಣೆ!
ಐಎಸ್‌ಡಿ ಆಂತರಿಕ ಭದ್ರತಾ ವಿಭಾಗದ ಐಜಿಪಿಯನ್ನಾಗಿ ಹೇಮಂತ್ ನಿಂಬಾಳ್ಕರ್, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಓದಿ:ಟಿ.ಎಂ.ವಿಜಯಭಾಸ್ಕರ್ಗೆ ಸನ್ಮಾನಿಸಿ ಬೀಳ್ಕೊಟ್ಟ ಐಎಎಸ್ ಅಧಿಕಾರಿಗಳ ತಂಡ...!
ಮಾನವ ಹಕ್ಕುಗಳು ಮತ್ತು ಕುಂದುಕೊರತೆಗಳ ವಿಭಾಗದ ಡಿಜಿಪಿಯನ್ನಾಗಿ ಡಾ.ಕೆ.ರಾಮಚಂದ್ರ ರಾವ್, ಗೃಹ ಇಲಾಖೆ ಕಾರ್ಯದರ್ಶಿ(ಪಿಸಿಎಎಸ್) ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯನ್ನಾಗಿ ಎಂ.ಚಂದ್ರಶೇಖರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಐಜಿಪಿಯನ್ನಾಗಿ ವಿಪುಲ್ ಕುಮಾರ್, ಉತ್ತರ ಕನ್ನಡ-ಕಾರವಾರ, ಭಟ್ಕಳ ಉಪವಿಭಾಗದ ಸಹಾಯಕ ಉಪಪೊಲೀಸ್ ಆಯುಕ್ತರನ್ನಾಗಿ ರಂಜಿತ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿದೆ.