ಕರ್ನಾಟಕ

karnataka

ETV Bharat / state

ಹಿರಿಯ‌ ನಾಗರಿಕರಿಗೆ ನಗರ ಆಯುಕ್ತರಿಂದ ಹೆಲ್ಪ್ ಲೈನ್ ಆರಂಭ - benegaluru police comissionar bhaskar rao

ಹಿರಿಯ ನಾಗರಿಕರಿಗೆ ಸರಿಯಾದ ವ್ಯವಸ್ಥೆ ಸಿಗದ ಕಾರಣ, ಅವರ ಸಹಾಯಕ್ಕಾಗಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೆಲ್ಪ್ ಲೈನ್ ಆರಂಭಿಸಿದ್ದಾರೆ.

helpline
helpline

By

Published : Apr 10, 2020, 11:56 AM IST

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಹಿನ್ನೆಲೆ ಸಹಾಯ ಬೇಡುತ್ತಿರುವವರಿಗಾಗಿ, ಮುಖ್ಯವಾಗಿ ಹಿರಿಯ ನಾಗರಿಕರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೆಲ್ಪ್ ಲೈನ್ ಓಪನ್ ಮಾಡಿದ್ದಾರೆ.

ಕೊರೊನಾ ವೈರಸ್ ಲಾಕ್ ಡೌನ್​ನಿಂದಾಗಿ ಏಕಾಂಗಿಯಾಗಿದ್ದೀರಾ? ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡು ಡಾಕ್ಟರ್ ಕನ್ಸಲ್ಟ್ ಮಾಡಬೇಕಾ? ಮೆಡಿಕಲ್ ಎಮರ್ಜೆನ್ಸಿಗಾಗಿ ಆ್ಯಂಬುಲೆನ್ಸ್ ಬೇಕಾ? ವಿದ್ಯುತ್, ವಾಟರ್, ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗಿದ್ಯಾ? ನಿಂದನೆ ಹಾಗೂ ಸಮಸ್ಯೆಗಳನ್ನ ಅನುಭವಿಸುತ್ತಿದ್ದೀರಾ? ಪೆನ್ಶನ್, ಬ್ಯಾಂಕಿಂಗ್, ಇಎಮ್ಐ ಬಗ್ಗೆ ಗೊಂದಲ ಇದೆಯಾ? ದಿನಸಿ ವಸ್ತುಗಳು, ಮೆಡಿಸಿನ್ಸ್ ಬೇಕಾ? ಹಾಗಾದರೆ 1090 ಅಥವಾ 100ಗೆ ಕರೆ ಮಾಡಿ. ಇದಕ್ಕಾಗಿ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಟೀಂ ಕೆಲಸ ನಿರ್ವಹಿಸಲಿದೆ. ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ತಿಳಿಸಿ ನಿಮ್ಮ ಮನೆಬಾಗಿಲಿಗೆ ಹೊಯ್ಸಳ ಬಂದು ಸಹಾಯ ಮಾಡುತ್ತೆ ಎಂದು ನಗರ ಆಯುಕ್ತ ತಿಳಿಸಿದ್ದಾರೆ.

ಹೆಲ್ಪ್ ಲೈನ್ ಓಪನ್

ಸದ್ಯ ನಗರದಲ್ಲಿ ಲಾಕ್​ ಡೌನ್ ಇರುವುದರಿಂದ ವಿನಾಕಾರಣ ಯಾರು ಕೂಡ ರಸ್ತೆಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈಗಾಗಲೇ ಎಲ್ಲೆಡೆ ಜಾಗೃತೆ ವಹಿಸಿದ್ದಾರೆ. ಆದರೆ ಯುವಕರುಅನಿವಾರ್ಯ ಕಾರಣಕ್ಕೆ ಹೊರಗೆ ಬಂದು ಹೇಗಾದರೂ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗ್ತಾರೆ. ಆದರೆ ಹಿರಿ ಜೀವಿಗಳಿಗೆ ಸರಿಯಾದ ವ್ಯವಸ್ಥೆ ಸಿಗದ ಕಾರಣ ಈ ರೀತಿಯಾದ ನಿರ್ಧಾರವನ್ನ ಕೈಗೊಂಡಿದ್ದಾರೆ.

ABOUT THE AUTHOR

...view details