ಕರ್ನಾಟಕ

karnataka

ETV Bharat / state

ಸ್ವಯಂನಿರ್ಮಿತ ವಿದ್ಯುತ್ ಚಾಲಿತ ವಾಹನಕ್ಕೆ ಸಹಾಯ ಮಾಡಿ: ಸಯ್ಯದ್ ಸಜ್ಜದ್ ಅಹಮದ್ - ಸಯ್ಯದ್ ಸಜ್ಜದ್ ಅಹಮದ್ ರಿಂದ ಸ್ವಯಂನಿರ್ಮಿತ ವಿದ್ಯುತ್ ಚಾಲಿತ ವಾಹನ

ಸರ್ಕಾರ, ಖಾಸಗಿ ಸಂಸ್ಥೆಗಳು ಸಹಕಾರ ಮಾಡಿದರೆ ನನ್ನ ಕನಸು ನನಸಾಗುತ್ತೆ, ಇದು ಸಾರ್ವಜನಿಕವಾಗಿ ಬಳಕೆಗೆ ಬರುತ್ತೆ ಎಂದು ವಿದ್ಯುತ್ ಚಾಲಿತ ವಾಹನವನ್ನು ತಯಾರಿಸಿರುವ ಸಯ್ಯದ್ ಸಜ್ಜದ್ ಅಹಮದ್ ರವರು ಹೇಳಿದ್ದಾರೆ.

syed sajjad ahmad
ಸಯ್ಯದ್ ಸಜ್ಜದ್ ಅಹಮದ್

By

Published : Nov 27, 2019, 3:37 AM IST

ಬೆಂಗಳೂರು:2004ರಲ್ಲೇ ವಿದ್ಯುತ್ ಚಾಲಿತ ವಾಹನ ತಯಾರಿಸಿ ಸುಮಾರು 1 ಲಕ್ಷ ಕಿಲೋಮೀಟರ್ ಇದೆ ಗಾಡಿಯಲ್ಲಿ ಭಾರತದಾದ್ಯಂತ ಸಂಚರಿಸಿದ್ದ ಸಯ್ಯದ್ ಸಜ್ಜದ್ ಅಹಮದ್ ರವರು ಇದೀಗ ತಮ್ಮ ವಾಹನಕ್ಕೆ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಸಯ್ಯದ್ ಸಜ್ಜದ್ ಅಹಮದ್

2004ರಲ್ಲೇ ವಿದ್ಯುತ್ ಚಾಲಿತ ವಾಹನ ತಯಾರಿಸಿ ಸುಮಾರು 1 ಲಕ್ಷ ಕಿಲೋಮೀಟರ್ ಇದೆ ಗಾಡಿಯಲ್ಲಿ ಭಾರತದಾದ್ಯಂತ ಸಂಚರಿಸಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರ ವಿಷನ್ 2020ಯ ಮಹತ್ವವನ್ನು ದೇಶದಲ್ಲಿ ಪ್ರಚಾರ ಮಾಡಿದವರು ಸಯ್ಯದ್ ಸಜ್ಜದ್ ಅಹಮದ್.

ಪ್ರಸ್ತುತವಾಗಿ ಇವರು ನಿರ್ಮಿಸಿದ ವಿದ್ಯುತ್ ಚಾಲಿತ ವಾಹನಕ್ಕೆ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಸಹಾಯ ಮಾಡಬೇಕು. 2 ಲಕ್ಷ ರೂಪಾಯಿಗೆ ಈ ಕಾರನ್ನು ಖರೀದಿಸಬಹುದು. ಇದು ಸಾರ್ವಜನಿಕರಿಗೆ ಬಳಕೆಗೆ ಬರುವಂತಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಯ್ಯದ್​ ಅಹಮದ್​ ಮನವಿಗೆ ಸರ್ಕಾರ ಸ್ಪಂದಿಸುತ್ತಾ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಾಗಿದೆ.

ABOUT THE AUTHOR

...view details