ಬೆಂಗಳೂರು :ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆ ಮುಂದಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ. ಜುಲೈ 19ರೊಳಗೆ ಹೆಚ್ಚುವರಿ ಲೇನ್‌ನ ಡೌನ್ ರಾಂಪ್‌ಗೆ ಅಡಿಪಾಯ ಹಾಕುವ ಕೆಲಸ ಪೂರ್ಣಗೊಳ್ಳಲಿದ್ದು, ಮುಂದಿನ ವಾರದಿಂದ ಹೆಬ್ಬಾಳ ರಸ್ತೆಯಲ್ಲಿ ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಸದ್ಯ ಟ್ರಾಫಿಕ್ ಪೊಲೀಸರು ಕೂಡ ಹೆಬ್ಬಾಳ ಮೇಲ್ಸೇತುವೆ ಡೌನ್ ರಾಂಪ್‌ನಲ್ಲಿರುವ ಸೆಂಟ್ರಲ್ ಮೀಡಿಯನ್ ತೆಗೆದುಹಾಕಿದ್ದಾರೆ. ವಿಮಾನ ನಿಲ್ದಾಣದ ಮಾರ್ಗದಿಂದ ವಾಹನಗಳಿಗೆ ಸಂಚಾರ ಸುಗಮವಾಗಿಸಿದ್ದಾರೆ.
ಟ್ರಾಫಿಕ್ ಸಮಸ್ಯೆ ತಗ್ಗಿಸಲು ಬಿಡಿಎ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚುವರಿ ಡೌನ್ ರ್‍ಯಾಂಪ್‌ಗೆ ಅಡಿಪಾಯ ಹಾಕುತ್ತಿದೆ. ಸ್ಥಳ ಪರಿಶೀಲನೆ ನಡೆಸಿರುವ ಬಿಡಿಎ ಅಧಿಕಾರಿಗಳು, ಸರ್ವಿಸ್ ರಸ್ತೆಯಲ್ಲಿ ಡೌನ್ ರ್‍ಯಾಂಪ್ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿರುವುದನ್ನು ಗಮನಿಸಿದ್ದಾರೆ. ಜುಲೈ 19ರೊಳಗೆ ಸರ್ವಿಸ್ ರಸ್ತೆಯ ಎರಡು ಸ್ಥಳಗಳಲ್ಲಿ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಚ್ಚಲಾಗುವುದು. ಶೀಘ್ರದಲ್ಲೇ ಸರ್ವಿಸ್ ರಸ್ತೆಯಲ್ಲಿ ಸಂಚಾರ ಪುನರಾರಂಭಿಲಾಗುವುದು ಎಂದು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಆರ್.ಸುರೇಶ್ ತಿಳಿಸಿದ್ದಾರೆ.
ಯೋಜನೆ ಪೂರ್ಣಗೊಳ್ಳಲು ಬೇಕಿದೆ ಒಂದೂವರೆ ವರ್ಷ : ಡೌನ್ ರ್‍ಯಾಂಪ್‌ಗೆ ಅಡಿಪಾಯ ಹಾಕಿದ ನಂತರ ಪಕ್ಕದ ಗೋಡೆಗಳ ನಿರ್ಮಾಣದಂತಹ ಕೆಲಸಗಳು ನಡೆಯಬೇಕಿದೆ. ಹೀಗಾಗಿ, ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :ವಿಪಕ್ಷಗಳ ಔತಣಕೂಟ ಮುಕ್ತಾಯ..ನಿರಂಕುಶ ಪ್ರಭುತ್ವದಿಂದ ದೇಶ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳಿಂದ ಒಗ್ಗಟ್ಟು: ಕಾಂಗ್ರೆಸ್