ಬೆಂಗಳೂರು:ಹೆಬ್ಬಾಳದ ಸುತ್ತಮುತ್ತ ವ್ಹೀಲಿಂಗ್, ಸ್ಟಂಟ್, ಡ್ರ್ಯಾಗ್ ರೇಸ್ ಮಾಡುತ್ತಿದ್ದ ಬೈಕ್ಗಳನ್ನ ಹೆಬ್ಬಾಳ ಸಂಚಾರಿ ಪೊಲೀಸರು ವಿಶೇಷ ಕಾರ್ಯಚಾರಣೆ ನಡೆಸಿ ಸುಮಾರು 30 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.
ವೀಕೆಂಡ್ನಲ್ಲಿ ಹೆಬ್ಬಾಳದ ಎಸ್ಟೀಂ ಮಾಲ್ನಿಂದ ಯಲಹಂಕದವರೆಗೂ ಎರಡು ಬಂದಿಯಲ್ಲೂ ಫ್ಲೈಓವರ್ ಮೇಲೆ ವ್ಹೀಲಿಂಗ್, ಸ್ಟಂಟ್, ಡ್ರ್ಯಾಗ್ ರೇಸ್ ಮಾಡುತ್ತಿದ್ದರು. ಮಧ್ಯರಾತ್ರಿ 2 ರಿಂದ 4 ಗಂಟೆವರೆಗೆ ಈ ಭಾಗದಲ್ಲಿ ಹೆಚ್ಚು ಡ್ಯ್ರಾಗ್ ರೇಸ್ ನಡೆಸಿ ರಸ್ತೆಯಲ್ಲಿ ಇತರ ವಾಹನ ಸವಾರಿಗೆ ತೊಂದರೆ ಕೊಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ವೀಲಿಂಗ್, ಸ್ಟಂಟ್ , ಡ್ಯಾಗ್ ರೇಸ್ ಮಾಡುತ್ತಿದ್ದವರ ಬೈಕ್ಗಳನ್ನು ವಶ ಪಡಿಸಿಕೊಂಡ ಹೆಬ್ಬಾಳ ಪೊಲೀಸರು ಈ ಕುರಿತು ಮಾಹಿತಿ ಪಡೆದ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಹೆಬ್ಬಾಳ ಟ್ರಾಫಿಕ್ ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಎರಡು ಕಡೆಯಿಂದ ಬ್ಯಾರಿಕೇಡ್ ಹಾಕಿ ಸುಮಾರು 30 ಬೈಕ್ಗಳನ್ನ ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಿದ ಮೂವತ್ತು ಬೈಕ್ಗಳಲ್ಲಿ ನಾಲ್ಕು ಇನ್ನೂ ನೋಂದಣಿಯಾಗಿಲ್ಲ. ಕೆಲವರು ಪೊಲೀಸರ ಕಾರ್ಯಚಾರಣೆ ಕಂಡು ನಡು ರಸ್ತೆಯಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲೂ ಹೆಚ್ಚಿನವರು ಅಪ್ರಾಪ್ತ ಬಾಲಕರಾಗಿದ್ದು, ಪೊಲೀಸರು ವಾಹನಗಳ ನೋಂದಣಿ ಸಂಖ್ಯೆ ಆಧಾರದ ಮೇಲೆ ಮನೆಗೆ ನೋಟಿಸ್ ಕಳುಹಿಸಿದ್ದಾರೆ.
ಪೋಷಕರ ನಿರ್ಲಕ್ಷ್ಯ ಕಂಡು ಬಂದಲ್ಲಿ ಅಥವಾ ವಾಹನ ಸವಾರರು ಅಪ್ರಾಪ್ತರು ಎಂದು ಕಂಡು ಬಂದ್ರೇ ಪೋಷಕರನ್ನ ಬಂಧಿಸಲಾಗುವುದು. ಹಾಗೆ ಕಳೆದ ನಾಲ್ಕು ತಿಂಗಳಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಚಾರಣೆ ಅಡಿಯಲ್ಲಿ 28 ಲಕ್ಷ ಪ್ರಕರಣ ದಾಖಲು ಮಾಡಿದ್ದೀವಿ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರೀಶೇಖರನ್ ತಿಳಿಸಿದರು.