ಆನೇಕಲ್ (ಬೆಂಗಳೂರು): ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಬೆಂಬಿಡದೆ ಕಾಡುತ್ತಿದ್ದು, ಆನೇಕಲ್ ಉಪ ವಿಭಾಗದ ಹೆಬ್ಬಗೋಡಿ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡುವ ಸಾಧ್ಯತೆ ಇದೆ.
ಹೆಬ್ಬಗೋಡಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೋಂಕು: ಠಾಣೆ ಸೀಲ್ಡೌನ್ ಸಾಧ್ಯತೆ - ಹೆಬ್ಬಗೋಡಿ ಪೊಲೀಸ್ ಠಾಣೆ ಸೀಲ್ಡೌನ್
ಹೆಬ್ಬಗೋಡಿ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದ್ದು, ಈ ಹಿನ್ನೆಲೆ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡುವ ಸಾಧ್ಯತೆ ಇದೆ.
ಐದು ದಿನಗಳ ಹಿಂದೆ ಆನೇಕಲ್ ಭಾಗದ 20 ಕ್ಕೂ ಹೆಚ್ಚು ಪೊಲೀಸರ ಗಂಟಲು ದ್ರವ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ ಒಬ್ಬ ಕಾನ್ಸ್ಟೆಬಲ್ಗೆ ಕೊರೊನಾ ಸೋಂಕು ತಗುಲಿದೆ. ಅನಂತ ನಗರದಲ್ಲಿ ಅವರು ವಾಸವಾಗಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದ ಎಂಟು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾಗೂ 24 ಗಂಟೆಗಳ ಕಾಲ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡುವ ಸಾಧ್ಯತೆ ಇದೆ. ಸೋಂಕಿತ ಸಿಬ್ಬಂದಿಯು ಅತ್ತಿಬೆಲೆ ಗಡಿಭಾಗ ಮತ್ತು ಸೀಲ್ ಡೌನ್ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಿದ್ದರು.
ಈ ಮೊದಲು ಇದೇ ಹೆಬ್ಬಗೋಡಿ ಠಾಣೆಯ ಎಎಸ್ಐ ಒಬ್ಬರಿಗೆ ಪಾಸಿಟಿವ್ ದೃಢಪಟ್ಟು, ಠಾಣೆ ಸೀಲ್ಡೌನ್ ಆಗಿತ್ತು. ಇದೀಗ ಎರಡನೆಯದಾಗಿ ಪಾಸಿಟಿವ್ ಪತ್ತೆಯಾಗಿ ಮತ್ತೆ ಸೀಲ್ಡೌನ್ ಆಗಲಿದೆ.