ಆನೇಕಲ್:ರಾಜ್ಯದಲ್ಲಿವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ನಡುವೆಯೂ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದ 4 ಕೋಟಿ 75 ಲಕ್ಷ ನಗದನ್ನು ವೀರಸಂದ್ರ ಸಿಗ್ನಲ್ ಬಳಿಯ ಚೆಕ್ ಪೋಸ್ಟ್ ಬಳಿ ಹೆಬ್ಬಗೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೆಬ್ಬಗೋಡಿ ಪೊಲೀಸರಿಂದ 4.75 ಕೋಟಿ ನಗದು ವಶ - etv bharata kannada
ನೀತಿ ಸಂಹಿತೆಯನ್ನು ಉಲ್ಲಂಘಿಸಿ ಹಣ ವರ್ಗವಣೆ ಮಾಡುತ್ತಿದ್ದ 4 ಕೋಟಿ 75 ಲಕ್ಷ ನಗದನ್ನು ವೀರಸಂದ್ರ ಸಿಗ್ನಲ್ ಬಳಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೆಬ್ಬಗೋಡಿ ಪೊಲೀಸರಿಂದ 4.75 ಕೋಟಿ ನಗದು ವಶ
ಖಾಸಗಿ ಕಂಪನಿಯ ಮೂರು ವಾಹನಗಳು ಸೇರಿದಂತೆ ಕೋಟ್ಯಾಂತರ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಣೆ ಹಿನ್ನೆಲೆ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್ಬಿಐ ಪ್ರಕಾರ ಪ್ರೋಟೊಕಾಲ್ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಪ್ರಕಾರ ಉಳಿದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಹೆಬ್ಬಗೋಡಿ ಪೊಲೀಸರು ಹಣ ವಶಕ್ಕೆ ಪಡೆದಿರುವ ಬಗ್ಗೆ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ:ಬೀದರ್ ಪೊಲೀಸರ ಭರ್ಜರಿ ಬೇಟೆ.. ಒಂದು ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶ
Last Updated : Apr 8, 2023, 7:15 PM IST