ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಅರ್ಧ-ಮುಕ್ಕಾಲು ಗಂಟೆ ಸುರಿದ ಮಳೆಗೆ ಯಶವಂತಪುರದ ಮೈಸೂರು ಲ್ಯಾಂಪ್ ರಸ್ತೆಯಲ್ಲಿ ಒಣಗಿದ ಮರ ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ:ಬಿರುಕು ಬಿಟ್ಟ ರಸ್ತೆಯಲ್ಲಿ ಸಿಲುಕಿದ ವಾಹನ - ಬೆಂಗಳೂರಿನಲ್ಲಿ ಇಂದು ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ರಸ್ತೆ ಕುಸಿದು ಅವಂತಾರ ಸೃಷ್ಟಿಯಾಗಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ:ಧರೆಗುರುಳಿದ ಮರ
ಇನ್ನೊಂದೆಡೆ ವರುಣನ ಆರ್ಭಟಕ್ಕೆ ಲಗ್ಗೆರೆಯ ಪ್ರೀತಿ ನಗರದಲ್ಲಿ ರಸ್ತೆ ಕುಸಿದಿದೆ. ಚರಂಡಿ ಪೈಪ್ ಒಡೆದದ್ದರಿಂದ ರಸ್ತೆ ಕುಸಿದಿದ್ದು, ಬಿರುಕು ಬಿಟ್ಟ ಜಾಗದಲ್ಲಿ ಕಾರು, ಬೈಕ್, ಆಟೋ ಸೇರಿ ಹಲವು ವಾಹನಗಳು ಸಿಲುಕಿವೆ.
ಫ್ರೇಜರ್ ಟೌನ್ನಲ್ಲೂ ಸಹ ಧಾರಾಕಾರ ಮಳೆ ಸುರಿದಿದೆ. ನಗರದ ಬಹುತೇಕ ಎಲ್ಲಾ ಕಡೆ ಸಾಧಾರಣ ಮಳೆಯಾಗಿದೆ.
Last Updated : Apr 24, 2020, 12:44 PM IST