ನೆಲಮಂಗಲ: ಪಟ್ಟಣದ ಹಲವೆಡೆ ಬಿರುಗಾಳಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ರಾತ್ರೋರಾತ್ರಿ ಜೆಸಿಬಿಗಳು ಕಾರ್ಯಾಚರಣೆಗಿಳಿದಿದ್ದವು.
ಪಟ್ಟಣದ ಬೈರವೇಶ್ವರ ಲೇಔಟ್‌ನಲ್ಲಿನ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ರಾಜಕಾಲುವೆ ಸ್ವಚ್ಛಗೊಳಿಸದ ಹಿನ್ನೆಲೆ ಒಮ್ಮೆಲೇ ಭಾರೀ ಪ್ರಮಾಣದ ನೀರು ರಾಜಕಾಲುವೆಯಲ್ಲಿ ಹರಿದ ಪರಿಣಾಮ ಹೆಚ್ಚಾದ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಜನರು ರಾತ್ರಿಯೆಲ್ಲ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ.