ಬೆಂಗಳೂರು:ಮುಂಬೈನಲ್ಲಿ ಕಳೆದೊಂದು ವಾರದಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಈಗಾಗಲೇ ವಿಮಾನಗಳ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ವರುಣನ ಆರ್ಭಟ; ಬೆಂಗಳೂರಿಂದ ಓಡಾಡುವ ಬಸ್ಗಳ ಸಂಚಾರ ಹೀಗಿದೆ! - etv bharat
ಮಹಾನಗರಿ ಮುಂಬೈನಲ್ಲಿ ಕಳೆದ ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಇಂದು ಸಹ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು ಹಲವು ವಿಮಾನಗಳ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಆದ್ರೆ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಇರಲಿದೆ ಅನ್ನೋದು ಖುಷಿ ತರಿಸಿದೆ.
ಸಂಗ್ರಹ ಚಿತ್ರ
ನಿತ್ಯ ಬೆಂಗಳೂರಿನಿಂದ ಮುಂಬೈ ಮತ್ತು ಪುಣೆಗೆ ಮೂರು ಬಸ್ಗಳು ಸಂಚಾರ ಮಾಡುತ್ತಿವೆ. ಆದರೆ, ಮುಂಬೈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರ ಓಡಾಟ ಕಡಿಮೆ ಆಗಿದೆ. ಜನರ ಓಡಾಟ ಕಡಿಮೆ ಆಗಿದೆ ವಿನಃ ಕೆಎಸ್ಆರ್ಟಿಸಿ ಬಸ್ಗಳ ಓಡಾಟ ಮಾತ್ರ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.
ಇನ್ನು ಆನ್ಲೈನ್ ಬುಕ್ಕಿಂಗ್ ಕೂಡ ಕಡಿಮೆ ಆಗಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸೇವೆ ಇರಲಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಿಂದ ನಿತ್ಯ ಮೂರು ಮಲ್ಟಿ ಆ್ಯಕ್ಸಲ್ ವೋಲ್ವೋ ಬಸ್ ಸೇವೆ ಇದ್ದು, ಸದ್ಯ, ಆನ್ಲೈನ್ಲ್ಲಿ ಮೂರು ಬಸ್ಗಳ ಸೀಟುಗಳು ಖಾಲಿ ಇವೆ.