ಕರ್ನಾಟಕ

karnataka

ETV Bharat / state

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 7ರವರೆಗೆ ವ್ಯಾಪಕ ಮಳೆ ಸಾಧ್ಯತೆ - ಕರ್ನಾಟಕ ಹವಾಮಾನ ವರದಿ

ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ವರೆಗೆ ಕೆಲವು ಭಾಗಗಳಲ್ಲಿ ಹಗುರ ಹಾಗೂ ಕೆಲವೊಮ್ಮೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

heavy-rain-in-coastal-districts-till-august-7
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 7ರವರೆಗೆ ವ್ಯಾಪಕ ಮಳೆ ಸಾಧ್ಯತೆ

By

Published : Aug 4, 2021, 3:35 AM IST

ಬೆಂಗಳೂರು:ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ವ್ಯಾಪಕ ಮಳೆ ಮುಂದುವರಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು ಮಂಗಳವಾರ ಕರಾವಳಿಯಲ್ಲಿ ಸಾಮಾನ್ಯ ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದ್ದು. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಂಗಳವಾರ ಮುಖ್ಯವಾಗಿ, ಶಿವಮೊಗ್ಗದ ತುಮರಿಯಲ್ಲಿ 6 ಸೆಂ.ಮೀ., ಉಡುಪಿಯ ಸಿದ್ದಾಪುರ ಮತ್ತು ಭಾಗಮಂಡಲದಲ್ಲಿ ತಲಾ 4 ಸೆಂ.ಮೀ., ಕೊಲ್ಲೂರು, ಆಗುಂಬೆ, ತಾಳಗುಪ್ಪದಲ್ಲಿ ತಲಾ 3 ಸೆಂ.ಮೀ., ಹೊನ್ನಾವರ, ಪಣಂಬೂರು, ಶಿರಾಲಿ, ಚಿಂತಾಮಣಿ, ಮೂಡುಬಿದ್ರೆ, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಉತ್ತರ ಕನ್ನಡದ ಮಂಕಿ, ಜಾನ್ಮನೆ, ಕೊಡಗಿನ ಮೂರ್ನಾಡು, ಸಂತಹಳ್ಳಿ, ಚಿಕ್ಕಮಗಳೂರಿನ ಶೃಂಗೇರಿ, ಕೊಟ್ಟಿಗೆಹಾರ, ತೀರ್ಥಹಳ್ಳಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಉಳಿದಂತೆ, ಉತ್ತರ ಕನ್ನಡದ ಯಲ್ಲಾಪುರ, ಬೇಲಿಕೇರಿ, ಸಿದ್ದಾಪುರ, ಕದ್ರಾ, ಹಳಿಯಾಳ, ಭಟ್ಕಳ, ಬಸಗೋಡು, ಪುತ್ತೂರು, ಬಂಟ್ವಾಳ, ಮಂಗಳೂರು, ಕಾರ್ಕಳ, ಕೋಟ, ಧಾರವಾಡದ ಕಲಘಟಗಿ, ಸೋಮವಾರಪೇಟೆ, ಹುದಕೆರೆ, ಸಕಲೇಶಪುರ, ಬಳ್ಳಾರಿಯ ಹಗರಿಬೊಮ್ಮನಹಳ್ಳಿ, ಹಡಗಲಿ, ಚಿಕ್ಕಮಗಳೂರಿನ ಜಯಪುರ, ಕೊಪ್ಪ, ಹುಂಚದಕಟ್ಟೆ, ತ್ಯಾಗರ್ತಿ, ಸಾಗರ, ಹರಪನಹಳ್ಳಿ, ತುಮಕೂರಿನ ಪಾವಗಡದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಆ. 7ರವರೆಗೆ ವ್ಯಾಪಕ ಮಳೆ:

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 7ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ವರೆಗೆ ಕೆಲವು ಭಾಗಗಳಲ್ಲಿ ಹಗುರ ಹಾಗೂ ಕೆಲವೊಮ್ಮೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:ದೆಹಲಿ ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನ: ಮಹಿಳೆಯ ಪ್ರಾಣ ಉಳಿಸಿದ ಡ್ರೈವರ್​

ABOUT THE AUTHOR

...view details