ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮಳೆಯೋ ಮಳೆ: ಮನೆಗಳಿಗೆ ನುಗ್ಗಿದ ನೀರು, ಸವಾರರ ಪರದಾಟ - rain

ಬೆಂಗಳೂರು ನಗರ ಮಲೆನಾಡಿನಂತಾಗಿದೆ. ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಲೇ ಇದ್ದು, ಇಂದು ಮುಂಜಾನೆ ಜನರು ವಾಕಿಂಗ್, ಜಾಗಿಂಗ್ ಬಿಟ್ಟು ಮನೆಯಲ್ಲಿಯೇ ಮಳೆ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.

rain
rain

By

Published : Oct 6, 2021, 10:00 AM IST

Updated : Oct 6, 2021, 10:27 AM IST

ಬೆಂಗಳೂರು: ತಡರಾತ್ರಿಯಿಂದ ಪ್ರಾರಂಭವಾದ ಮಳೆ ಇಂದು ಮುಂಜಾನೆವರೆಗೂ ನಗರದ ಹಲವು ಭಾಗಗಳಲ್ಲಿ ಸುರಿದಿಯಿತು. ಪರಿಣಾಮ ರಸ್ತೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮಳೆ ಎಲ್ಲೆಲ್ಲಿ?:

ನಗರದ ಆರ್.ಆರ್. ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಮಲೆನಾಡಿನಂತಾದ ಬೆಂಗಳೂರು ನಗರ

ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ, ಮನೋರಾಯಯನ ಪಾಳ್ಯ, ಹೊರಮಾವು, ಬಸವನಪುರ, ದೊಡ್ಡನೆಕುಂದಿ, ಕೊಟ್ಟಿಗೆಪಾಳ್ಯ, ಬಾಣಸವಾಡಿ, ಚೊಕ್ಕಸಂದ್ರ, ಪೀಣ್ಯ, ವಿದ್ಯಾಾರಣ್ಯಪುರ, ಅತ್ತೂರು, ಕೆಂಪೇಗೌಡ ವಾರ್ಡ್, ಬಾಗಲಗುಂಟೆ, ದೊಡ್ಡಬೊಮ್ಮಸಂದ್ರ, ಬ್ಯಾಟರಾಯನಪುರ, ಹೆಗ್ಗನಹಳ್ಳಿ, ಕಲ್ಯಾಣನಗರ, ಬೆಳ್ಳಂದೂರು, ಸಿಂಗಸಂದ್ರ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ.

ಪ್ರಮುಖ ರಸ್ತೆಗಳಲ್ಲಿ ನೀರು:

ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೆ, ಮಲ್ಲೇಶ್ವರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಮಳೆ ಹಿನ್ನೆಲೆಯಲ್ಲಿ ಮುಂಜಾನೆ ಜನರು ವಾಕಿಂಗ್, ಜಾಗಿಂಗ್ ಬಿಟ್ಟು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ಸಹ ನೀರು ನಿಂತಿದ್ದು, ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಶಿಥಿಲಗೊಂಡ ಕಟ್ಟಡಗಳು ಪಾದಚಾರಿಗಳ ಮೇಲೆ ಬೀಳುವ ಸಾಧ್ಯತೆ ಇದೆ.

Last Updated : Oct 6, 2021, 10:27 AM IST

ABOUT THE AUTHOR

...view details