ಕರ್ನಾಟಕ

karnataka

ETV Bharat / state

ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ಜನರು ತತ್ತರ: ಆಸ್ಪತ್ರೆಗೆ ಹೋಗಲಾಗದೇ ಪರದಾಡಿದ ವೃದ್ಧ! - ಮನೆಗೆ ನುಗ್ಗಿದ ಮಳೆ ನೀರು

ಮಳೆ ನೀರು ನುಗ್ಗಿದ್ದರಿಂದ, ಓರ್ವ ವೃದ್ಧ ಆಸ್ಪತ್ರೆಗೆ ಹೋಗಲು ಪರದಾಟ ನಡೆಸಿದ್ದು, ರಸ್ತೆಯಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ವೃದ್ಥನ ಪರದಾಟ ಹೇಳ ತೀರದ್ದಾಗಿತ್ತು.

heavy-rain in bengaluru
heavy-rain in bengaluru

By

Published : Jul 26, 2021, 10:31 AM IST

ಬೆಂಗಳೂರು:ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿಯ ಜನರು ತತ್ತರಿಸಿ ಹೋಗಿದ್ದಾರೆ. ಮಳೆ ನೀರಿನಿಂದ ಮನೆಯಿಂದ ಹೊರಗೆ ಬರುವುದಕ್ಕೆ ವೃದ್ಧ ಒದ್ದಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ನಗರದ ಹಲಸೂರಿನ ಗುಪ್ತ ಲೇಔಟ್​ನಲ್ಲಿ ನಡೆದ ಘಟನೆ ವರದಿಯಾಗಿದೆ.

ಮನೆಯ ಸುತ್ತ ಮುತ್ತ ರಸ್ತೆಯಲ್ಲಿ ಎಲ್ಲಿ ನೋಡಿದರೂ ಸಂಪೂರ್ಣ ಮಳೆ ನೀರು. ಮಳೆ ನೀರು ನುಗ್ಗಿದ್ದರಿಂದ, ಓರ್ವ ವೃದ್ಧ ಆಸ್ಪತ್ರೆಗೆ ಹೋಗಲು ಪರದಾಟ ನಡೆಸಿದ್ದಾರೆ. ರಸ್ತೆಯಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ವೃದ್ಥನ ಪರದಾಟ ಹೇಳ ತೀರದ್ದಾಗಿತ್ತು.

ಮಳೆಯ ನೀರು ಮೊಣಕಾಲು ತನಕ ಇರುವ ಕಾರಣದಿಂದ ವಯೋ ವೃದ್ಧನಿಗೆ ನಡೆಯಲು ತೊಂದರೆಯಾಗಿದೆ. ಆರೋಗ್ಯ ಏರುಪೇರು ಆಗಿದ್ದ ಹಿನ್ನೆಲೆ ಅವರು ಆಸ್ಪತ್ರೆಗೆ ಹೊರಟಿದ್ದರು. ಮನೆಯ ಮುಂದೆ ಮಳೆಯ ನೀರು ನಿಂತಿರುವ ಕಾರಣ ತೊಂದರೆಯಾಗಿದೆ.

ಬೆಂಗಳೂರಿನಲ್ಲಿ ಮಳೆ

ಕೊನೆಗೆ ಕುಟುಂಬದ ಸದಸ್ಯರ ಸಹಾಯದಿಂದ ವೃದ್ಧನನ್ನು ಕಾರ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಿಬಿಎಂಪಿಯ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಜನರು ಆತಂಕದಲ್ಲೇ ದಿನದೂಡುವಂತಾಗಿದೆ.

ABOUT THE AUTHOR

...view details