ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಭಾರೀ ಮಳೆ : ಮಲ್ಲೇಶ್ವರಂನಲ್ಲಿ ಕಾಂಪೌಂಡ್ ಕುಸಿತ, ಹಲವೆಡೆ ನುಗ್ಗಿದ ನೀರು

ಭಾರೀ ಮಳೆಗೆ ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್ ಮುಂಭಾಗ, ಕೋರಮಂಗಲ ಆರನೇ ಬ್ಲಾಕ್​ನ ರಸ್ತೆಗಳು ಹಾಗೂ ವರ್ತೂರು ಫೋರಂ ಮಾಲ್ ಬಳಿ ರಾಜಕಾಲುವೆಗಳ ನೀರು ರಸ್ತೆಯಲ್ಲಿ ಹರಿಯುತ್ತಿದೆ.

heavy-rain-in-bengaluru
ಬೆಂಗಳೂರಲ್ಲಿ ಭಾರೀ ಮಳೆ

By

Published : Oct 11, 2020, 12:37 AM IST

Updated : Oct 11, 2020, 5:33 AM IST

ಬೆಂಗಳೂರು:ಶನಿವಾರ ರಾತ್ರಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಲ್ಲೇಶ್ವರಂನಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದಿದ್ದು, ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ ಒಂದು ಕಾರು, ನಾಲ್ಕು ಬೈಕ್​ಗಳು ಜಖಂಗೊಂಡಿವೆ.

ಬೆಂಗಳೂರಲ್ಲಿ ಭಾರೀ ಮಳೆ

ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಮಲ್ಲೇಶ್ವರಂ ಮಂತ್ರಿ ಮಾಲ್ ಮುಂಭಾಗ, ಕೋರಮಂಗಲ ಆರನೇ ಬ್ಲಾಕ್​ನ ರಸ್ತೆಗಳು ಹಾಗೂ ವರ್ತೂರು ಫೋರಂ ಮಾಲ್ ಬಳಿ ರಾಜಕಾಲುವೆಗಳ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್​​ ಉಂಟಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯಿಂದ ನೀರು ನಿಂತಿದೆ. ಹೆಬ್ಬಾಳದ ಗುಡ್ಡದಹಳ್ಳಿ ಹಾಗೂ ಗಂಗಮ್ಮ ಬಡಾವಣೆಗೆ ನೀರು ನುಗ್ಗಿದೆ. ಲೇಔಟ್​​ನ ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗಿದ್ದು, ಸ್ಥಳೀಯರೇ ನೀರು ತೆರವು ಮಾಡಲು ಮ್ಯಾನ್​ಹೋಲ್ ತೆರೆಯಲು ಹರಸಾಹಸಪಟ್ಟರು.

Last Updated : Oct 11, 2020, 5:33 AM IST

ABOUT THE AUTHOR

...view details